ಕರಾವಳಿಯ ವಿಶಿಷ್ಟ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕರ್ನಾಟಕ ಸರ್ಕಾರವು ರಾಜ್ಯ ಕ್ರೀಡೆಯ ಮಾನ್ಯತೆ ನೀಡಲು ನಿರ್ಧರಿಸಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಸಮಾಜಮುಖಿ ಸೇವಾ ಮನೋಭಾವ ಹಾಗೂ ದಾನ-ಧರ್ಮದಲ್ಲಿ ಮುಂಚೂಣಿಯಲ್ಲಿರುವ ನೀರೆ ರಾಮಕೃಷ್ಣ ವಾಗ್ಳೆ ಸಹೋದರರು, ಸಾರ್ವಜನಿಕರ ಪ್ರಯೋಜನಕ್ಕಾಗಿ ಬೈಲೂರು ಕೆಳಪೇಟೆಯಲ್ಲಿ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಿ ಕೊಟ್ಟಿದ್ದಾರೆ.
ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇದರ ರಜತ ಪೂರ್ತಿ ಸಂಭ್ರಮದ ಅಂಗವಾಗಿ ,ಲೋಕ ಕಲ್ಯಾಣಾರ್ಥವಾಗಿ ಉಡುಪಿಯ ಕುತ್ಪಾಡಿ ಬಳಿಯಿರುವ ತ್ರಿಮೂರ್ತಿ ಸಂಗಮ ಕ್ಷೇತ್ರವಾದ ಕಾನಂಗಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 13-9-2025ರಂದು ದಶಾವತಾರ ಮಂತ್ರ ಯಾಗವು ಜರುಗಿತು.
ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ ಮತ್ತು ಸಾಮರಸ್ಯ ನಡಿಗೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಭಾಗವಹಿಸಿ ಮಾತನಾಡಿದರು.