ಉಡುಪಿಯ ಶ್ರೀ ಕ್ಷೇತ್ರ ಹೆರ್ಗ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನಾಂಕ 22.09.2025 ರಿಂದ 30.09.2025ನೇ ಮಂಗಳವಾರದವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿರುವುದು.
ಕಾರ್ಕಳ - ಬೈಲೂರು - ಕಣಂಜಾರ್ - ಪಳ್ಳಿ - ಮೂಡುಬೆಳ್ಳೆ - ಉಡುಪಿ ಮಾರ್ಗವಾಗಿ ಸಂಚರಿಸುತಿದ್ದ ಸರಕಾರಿ ಬಸ್ಸು ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿದ್ದು ಪುನರಾರಂಬಿಸಲು ಪಳ್ಳಿ - ನಿಂಜೂರು ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಯಿತು.
ಪಕ್ಷ ಬೇಧವಿಲ್ಲದೆ ಕೋಟ್ಯಾಂತರ ಅನುದಾನ ಬಿಡುಗಡೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆಗಳು ಮತ್ತು ಗುಣಮಟ್ಟದ, ಕಮಿಷನ್ ರಹಿತ ಕಾಮಗಾರಿ ನಡೆಯಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಹೇಳಿದ್ದಾರೆ.
ಉಡುಪಿ ಟೈಲರ್ಸ್ ಸಹಕಾರಿ ಸಂಘದ ಚತುರ್ಥ ವಾರ್ಷಿಕ ಮಹಾಸಭೆಯು ತಾ 17/9/25 ರಂದು ಅಪರಾಹ್ನ 3ಗಂಟೆಗೆ ಉಡುಪಿ ಜಗನ್ನಾಥ ಸಭಾ ಭವನದಲ್ಲಿ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.