ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ; ಉತ್ತಮ ಗುಣಮಟ್ಟದ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ : ಶುಭದರಾವ್

Date:

spot_img
shubad-rao11

ಕಾರ್ಕಳ : ರಾಜ್ಯದ ಅಭಿವೃದ್ಧಿ ಚಿಂತನೆಯೊಂದಿಗೆ ಪಕ್ಷ ಬೇದವಿಲ್ಲದೆ ಎಲ್ಲಾ ಶಾಸಕರ ಕ್ಷೇತ್ರಗಳಿಗೆ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಬಿಡುಗಡೆಗೊಂಡ ಅನುದಾನಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿ ಜೊತೆಗೆ ಕಮಿಷನ್ ರಹಿತವಾದ ಕಾಮಗಾರಿಯಾಗಲಿ ಎನ್ನುವುದು ಕಾಂಗ್ರೆಸ್ ಬಯಸುತ್ತದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ತಿಳಿಸಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಯ ಬದುಕಿಗೆ ಅಮೂಲ್ಯ ಕೊಡುಗೆಗನ್ನು ನೀಡುತ್ತಾ ಬಂದಿರುವ ರಾಜ್ಯ ಸರಕಾರವು ಇತರ ಅಭಿವೃದ್ಧಿ ಕೆಲಸಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸುವ ಭರವಸೆಯನ್ನು ನೀಡುವ ಮೂಲಕ ಅಭಿವೃದ್ಧಿ ಶೂನ್ಯ ಸರಕಾರ ಎಂದು ಅಪಪ್ರಚಾರ ಮಾಡುತ್ತಿದ್ದ ಬಿಜೆಪಿ ಶಾಸಕರಿಗೆ ತಕ್ಕ ಉತ್ತರ ನೀಡಿದಂತಾಗಿದೆ ಎಂದರು.

ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಜನರು ನೇರವಾಗಿ ಸವಲತ್ತುಗಳನ್ನು ಪಡೆಯುವುದರಿಂದ 40 ಶೇಕಡಾ ಕಮಿಷನ್ ಆರೋಪದ ಹೊತ್ತಿರುವ ಬಿಜೆಪಿ ಶಾಸಕರಿಗೆ ಬೇರೆ ದಾರಿ ಇಲ್ಲದೆ ಸರಕಾರವನ್ನು ದೂರುವುದೇ ಕೆಲಸವಾಗಿದೆ. ಒಂದು ಕಡೆ ಸರಕಾರ ಅನುದಾನ ಬಿಡುಗಡೆ ಮಾಡವುದಿಲ್ಲ ಎಂದು ಆರೋಪಿಸುವ ಶಾಸಕರು ಕ್ಷೇತ್ರದಲ್ಲಿ ನಿರಂತರ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸಿ ಇದು ನನ್ನ ವಿಶೇಷ ಪ್ರಯತ್ನ ಎಂದು ಬಿಂಬಿಸುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಅನುದಾನ ಎಷ್ಟು ಬಿಡುಗಡೆಯಾಗಿದೆ ಎನ್ನುವುದು ಮುಖ್ಯವಲ್ಲ ಅದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಲಾಗಿದೆ ? ಎನ್ನುವುದೇ ಮುಖ್ಯ. ನಗರದ ರಥಬೀದಿಯ ಒಳಚರಂಡಿ ಕಾಮಗಾರಿ, ಪರಶುರಾಮ ಥೀಮ್ ಪಾರ್ಕ್, ನೀರಾವರಿ ಯೋಜನೆ, ಹೀಗೆ ಅನೇಕ ಕಾಮಗಾರಿಗಳು ಕಮಿಷನ್ ಆಸೆಗೆ ಬಲಿಯಾಗಿ ಕಳಪೆ ಕಾಮಗಾರಿ ಎಂದು ಸಾಬೀತಾಗಿದೆ ಆದರೆ ಮುಂದೆ ನಡೆಯುವ ಕಾಮಗಾರಿಗಳೂ ಹೀಗಾಗಿ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರವಹಿಸುವಂತೆ ಶಾಸಕರಿಗೆ ಮನವಿ ಮಾಡುತ್ತೇನೆ ಎಂದು ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ