
ಉಡುಪಿ: ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾವೇಶ ಮತ್ತು ಸಾಮರಸ್ಯ ನಡಿಗೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮಾತನಾಡಿದ ಅವರು, ವಚನ ಚಕ್ರವರ್ತಿ ಬಸವಣ್ಣನವರ ತತ್ವಗಳು, ಅವರ ಸಮಾಜ ಪರಿವರ್ತನಾ ಹೋರಾಟ ಹಾಗೂ ವಿಶ್ವಮಾನವೀಯ ಮೌಲ್ಯಗಳ ಕುರಿತು ಆಳವಾದ ಚಿಂತನೆಗಳನ್ನು ಹಂಚಿಕೊಂಡರು. ಬಸವಣ್ಣನವರ ಪ್ರಸಿದ್ಧ ಸಂದೇಶವಾದ “ಕಾಯಕವೇ ಕೈಲಾಸ” ಮತ್ತು ಶರಣರ ಸರ್ವಜ್ಞತೆಯ ಚಿಂತನೆಗಳು ಇಂದಿಗೂ ಸಮಾಜದ ಪ್ರಗತಿಗೆ ಮಾರ್ಗದರ್ಶಿಯಾಗಿವೆ ಎಂದು ಅವರು ಸ್ಮರಿಸಿದರು. ಬಸವ ತತ್ವಗಳ ಆಚರಣೆ ಇಂದಿನ ಸಮಾಜಕ್ಕೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.




































