ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇದರ ರಜತ ಪೂರ್ತಿ ಸಂಭ್ರಮ : ಲೋಕ ಕಲ್ಯಾಣಾರ್ಥವಾಗಿ ದಶಾವತಾರ ಮಂತ್ರ ಯಾಗ

Date:

spot_img

ಉಡುಪಿ : ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇದರ ರಜತ ಪೂರ್ತಿ ಸಂಭ್ರಮದ ಅಂಗವಾಗಿ ,ಲೋಕ ಕಲ್ಯಾಣಾರ್ಥವಾಗಿ ಉಡುಪಿಯ ಕುತ್ಪಾಡಿ ಬಳಿಯಿರುವ ತ್ರಿಮೂರ್ತಿ ಸಂಗಮ ಕ್ಷೇತ್ರವಾದ ಕಾನಂಗಿ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದಲ್ಲಿ ದಿನಾಂಕ 13-9-2025ರಂದು ದಶಾವತಾರ ಮಂತ್ರ ಯಾಗವು ಜರುಗಿತು. ಈ ಯಾಗವು ಸನಾತನ ಹಿಂದೂ ಧರ್ಮದ ಏಳಿಗೆಗಾಗಿ , ಗೋವಿನ ಉಳಿಯುವಿಕೆಗಾಗಿ , ನಮ್ಮ ನೆಲ , ನಮ್ಮ ಜಲ , ನಮ್ಮ ಗ್ರಾಮ , ನಮ್ಮ ರಾಜ್ಯ , ನಮ್ಮ ರಾಷ್ಟ್ರದ ಶ್ರೇಯಸ್ಸಿಗಾಗಿ , ದುಷ್ಟಶಕ್ತಿಗಳ ನಿಗ್ರಹಕ್ಕಾಗಿ , ಸಜ್ಜನರ ರಕ್ಷಣೆಗಾಗಿ , ದೇಶ ವಿರೋಧಿ ಶಕ್ತಿಗಳ ದಮನಕ್ಕಾಗಿ ಲೋಕ ಕಲ್ಯಾಣಾರ್ಥವಾಗಿ ಜರುಗಿತು. ಶ್ರೀ ಮತ್ಸ್ಯ ,ಕೂರ್ಮ, ವರಾಹ , ನರಸಿಂಹ , ವಾಮನ , ಪರಶುರಾಮ , ರಾಮಚಂದ್ರ , ಕೃಷ್ಣ , ಬುದ್ಧ , ಕಲ್ಕಿ ಮುಂತಾದ ಪರಮಾತ್ಮನ ದಶಾವತಾರ ಮಂತ್ರ ಜಪ ಪುರಸ್ಸರ ದಶ ಸಹಸ್ರ ಸಂಖ್ಯೆಯಲ್ಲಿ ದಶವತಾರ ಮಂತ್ರ ಯಾಗವು ಜರುಗಿತು.

ಈ ಯಾಗವು ಶ್ರೀ ದೇವಸ್ಥಾನದ ಮೊಕ್ತೇಸರರಾದ ಶ್ರೀ ರಾಮಕೃಷ್ಣ ಭಟ್ , ಪ್ರಧಾನ ಅರ್ಚಕರಾದ ಶ್ರೀ ವೇ .ಮೂ ಬಾಲಕೃಷ್ಣ ಭಟ್, ಶ್ರೀ ರಾಧಾಕೃಷ್ಣ ಭಟ್ , ಶ್ರೀ ಅನಂತ ಭಟ್ ಅವರ ಆಯೋಜಕತ್ವದಲ್ಲಿ ಜರುಗಿತು.

ಈಯಾಗವು ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ಅಧ್ಯಕ್ಷರಾದ , ಶ್ರೀ ಪಿ ರಾಧಾಕೃಷ್ಣ ಭಟ್ ಹಿರಿಯಡ್ಕ , ಶ್ರೀ ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ ,ಶ್ರೀ ನಾರಾಯಣ ತಂತ್ರಿ ಪರ್ಕಳ , ಶ್ರೀ ವಿಶ್ವೋತ್ತಮ ಆಚಾರ್ಯ ನಂದನ ಕುಂಜಿತ್ತಾಯ , ಶ್ರೀ ರಾಘವೇಂದ್ರ ಭಟ್ , ಶ್ರೀ ನವೀನ ಐತಾಳ ಹಾಗೂ ೨೫ಕ್ಕೂ ಹೆಚ್ಚು ಋತ್ವಿಜಯರ ಸಹಕಾರದೊಂದಿಗೆ ಯಶಸ್ವಿಯಾಗಿ ಜರುಗಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.