ಇದೇ ತಿಂಗಳ ಆರಂಭದಲ್ಲಿ (ಅ. 02) ಬಿಡುಗಡೆಯಾಗಿ ವಿಶ್ವಾದ್ಯಂತ ದೊಡ್ಡ ಮಟ್ಟದ ಯಶಸ್ಸು ಮತ್ತು ದಾಖಲೆಯನ್ನು ಕಂಡಿರುವ ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಸಿನಿಮಾ 'ಕಾಂತಾರ: ಚಾಪ್ಟರ್ 1' (Kantara: Chapter 1) ಇದೀಗ ಓಟಿಟಿಗೆ ಬರಲು ಸಜ್ಜಾಗಿದೆ.
'ಕಾಂತಾರ ಚಾಪ್ಟರ್-1' ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದ್ದು, ಅದರ ಸಾಹಸ ಸನ್ನಿವೇಶಗಳು ಮತ್ತು ಕ್ಲೈಮ್ಯಾಕ್ಸ್‌ನ ವಾವ್ ಎನ್ನಿಸುವ ದೃಶ್ಯಗಳು ದೇಶಾದ್ಯಂತ ಮೆಚ್ಚುಗೆ ಗಳಿಸಿವೆ.
ಚಲನಚಿತ್ರದಲ್ಲಿ ದೈವ ಪಾತ್ರಗಳು ಆವೇಶಭರಿತರಾಗಿ ವರ್ತಿಸುವ ದೃಶ್ಯಗಳನ್ನು ಅನುಕರಿಸಿ, ಕೆಲವು ವ್ಯಕ್ತಿಗಳು ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಳ್ಳುತ್ತಿರುವುದು ತುಳುನಾಡಿನ ಜನರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ