
ಬಜಗೋಳಿ: ಪ್ರಸಿದ್ಧ ಕಲಾತ್ಮಕ ಪ್ರತಿಭೆ ಅಭಿಷೇಕ್ ಬಜಗೋಳಿ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ” ಶೀಘ್ರದಲ್ಲೇ ರಂಗೇರಲಿದೆ.
ಈ ನಾಟಕದ ಅಧಿಕೃತ ಶುಭಾರಂಭವಾದ ಮುಹೂರ್ತ ಕಾರ್ಯಕ್ರಮವು ಇದೇ ಬರುವ ಶುಕ್ರವಾರ ಜೂನ್ 4ರಂದು , ಬಜಗೋಳಿ ಶ್ರೀ ಮುಡ್ರಾಲು ದುರ್ಗಾಪರಮೇಶ್ವರಿ ಅಮ್ಮನವರ ಪವಿತ್ರ ಸನ್ನಿಧಿಯಲ್ಲಿ ಜರುಗಲಿದೆ. ನಾಟಕದ ತಂಡ, ಸ್ಥಳೀಯ ಅಭಿಮಾನಿಗಳು ಹಾಗೂ ಕಲಾಪೋಷಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ನಾಟಕದಲ್ಲಿ “ಬೊಳ್ಳಿ ಕಲಾವಿದರು” ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ನಾಟಕದ ಸಮಗ್ರ ನಿರ್ವಹಣೆಯನ್ನು “ಕಾಮಿಡಿ ರಾಜೆ” ಖ್ಯಾತಿಯ ನಾಗರಾಜ್ ಕಾಡುಹೊಳೆಯವರು ನಿರ್ವಹಿಸಲಿದ್ದಾರೆ. ಸಲಹೆ ಸಹಕಾರವನ್ನು ಮಹಾಲಕ್ಷ್ಮಿ ಆರ್ಟ್ಸ್ ಬಜಗೋಳಿಯ ದಿಲೀಪ್ ಡಿ ಕೆ ಹಾಗೂ ಅಕ್ಷತ್ ಮಾಳರವರು ನೀಡಲಿದ್ದಾರೆ.
ತುಳು ನಾಟಕ ಕ್ಷೇತ್ರದಲ್ಲಿ ಹೊಸ ರೀತಿಯ ಕುತೂಹಲ ಭರಿತ ವಿಷಯ ಇರುವ ಕಥೆಯೊಂದಿಗೆ ರೂಪುಗೊಂಡಿರುವ ಈ ವರ್ಷದ ಹೊಚ್ಚ ಹೊಸ ತುಳು ಹಾಸ್ಯಮಯ ಸಾಮಾಜಿಕ ನಾಟಕ “ಬಿರ್ಸೆ”, ಪ್ರೇಕ್ಷಕರಿಗೆ ಹೆಚ್ಚಿನ ಮನೋರಂಜನೆಯನ್ನು ನೀಡಲಿದೆ ಎನ್ನುವ ನಿರೀಕ್ಷೆಯಿದೆ.