1995 ರ ನಂತರದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲು ಗಮನ ಸೆಳೆಯುವ ಸೂಚನೆ ಮಂಡಿಸಿ ಯಶಸ್ವಿಯಾದ ವಿ ಪ ಸದಸ್ಯ ಶಶೀಲ್ ಜಿ ನಮೋಶಿ

Date:

spot_img
shasheel g namoshi22

ಕಲಬುರ್ಗಿ : 1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಗಮನ ಸೆಳೆಯುವ ಸೂಚನೆ ಮಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಅನುದಾನ ನೀಡುವ ಭರವಸೆ ಪಡೆಯುವಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯಶಸ್ವಿಯಾದರು.

ಇಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮೊದಲಿಗೆ ಗಮನ ಸೆಳೆಯುವ ಸೂಚನೆ ಮಂಡಿಸಿದಾಗ ಸರ್ಕಾರ ನೀಡಿದ ಉತ್ತರಕ್ಕೆ ತೃಪ್ತರಾಗಲಿಲ್ಲ. ಆದರೆ ಮಾನ್ಯ ಸಚಿವರಾದ ಮಧು ಬಂಗಾರಪ್ಪನವರು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿಯವರಿಗೆ ನಮ್ಮ ರಾಜ್ಯ ಸರ್ಕಾರ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಹಿತ ಕಾಪಾಡಲು ಬದ್ಧವಾಗಿದ್ದು 1995 ರಿಂದ 2005 ರ ವರೆಗಿನ ಅಂದರೆ 10 ವರ್ಷಗಳ ವರೆಗಿನ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲು ಸಿದ್ಧವಿದ್ದು ಕೂಡಲೆ ನಾನು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ , ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಅತಿ ಶೀಘ್ರದಲ್ಲೇ ಧನಾತ್ಮಕ ತೀರ್ಮಾನ ತೆಗೆದುಕೊಳ್ಳಲು ಸಿದ್ಧವಿರುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಮೋಶಿಯವರು ಕೇವಲ ಮೌಖಿಕವಾಗಿ ಭರವಸೆ ನೀಡುವುದಕ್ಕಿಂತ ನಾಳೆಯೇ ಇದಕ್ಕೊಂದು ಲಿಖಿತ ಆದೇಶ ಹೊರಡಿಸಲು ಆಗ್ರಹಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಾ. ಶಿವಪ್ರಸಾದ್ ಶೆಟ್ಟಿಗೆ ಎನ್‌ಸಿಸಿ ತರಬೇತಿಯಲ್ಲಿ ಪ್ರಥಮ ಸ್ಥಾನ

ನಿಟ್ಟೆ ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಮಹಾರಾಷ್ಟ್ರದ ಕಾಮ್ಟೀ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ ಪ್ರವಾಸೋದ್ಯಮ ಮ್ಯಾಸ್ಕಾಟ್ ಸ್ಪರ್ಧೆ: ನಿಟ್ಟೆಯಲ್ಲಿ ಜುಲೈ 25ಕ್ಕೆ ಆಯೋಜನೆ

ಉಡುಪಿ ಪ್ರವಾಸೋದ್ಯಮದ ಅಧಿಕೃತ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ ಜುಲೈ 25ರಂದು ನಿಟ್ಟೆಯಲ್ಲಿ ನಡೆಯಲಿದೆ. ಭಾಗವಹಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಳೆಗಾಲದ ಜ್ವರ, ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ಸರ್ಕಾರ ಸನ್ನದ್ಧ

ಮಳೆಗಾಲದಲ್ಲಿ ವೈರಲ್ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ. ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.