ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಣಂಜಾರು ಮತ್ತು ಶ್ರೀ ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್ ಅವರ ಸಹಯೋಗದಲ್ಲಿ ಜೂನ್ 15, 2025ರ ಭಾನುವಾರ, ಮಿಥುನ ಸಂಕ್ರಾಂತಿಯ ಪವಿತ್ರ ದಿನದಂದು 'ವಿಶ್ವ ಪರಿಸರ ದಿನಾಚರಣೆ' ಯ ಅಂಗವಾಗಿ "ಪರಿಸರ ಪೂಜನೆ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಕಣಂಜಾರಿನಲ್ಲಿ ಭಕ್ತಿ ಭಾವಪೂರ್ಣವಾಗಿ ಆಚರಿಸಲಾಯಿತು.
ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತಾಮಂದಿರ ಭಾರತ ಮೇಳದ ಪ್ರಯುಕ್ತ ಹಲಸು ಮಾವು ಹಣ್ಣುಗಳ ಹಬ್ಬವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದ ಮು೦ಭಾಗದ ಗೀತಾ ಮಂದಿರದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದಂಗಳರವರು ಉದ್ಘಾಟಿಸಿದರು.