ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ 'ಕಾಂತಾರ ಚಾಪ್ಟರ್ -1' (Kantara Chapter 1) ಚಿತ್ರವು ದೇಶಾದ್ಯಂತ ಮತ್ತು ವಿಶ್ವದ 30 ದೇಶಗಳಲ್ಲಿ ಭಾರಿ ಪ್ರದರ್ಶನ ಕಾಣುತ್ತಿದ್ದರೂ, ಈ ಕ್ರೇಜ್ ಈಗ ವಿವಾದಕ್ಕೆ ಕಾರಣವಾಗಿದೆ.
ಇಡೀ ದೇಶದಾದ್ಯಂತ ಕರಾವಳಿ ಸಂಸ್ಕೃತಿ ಮತ್ತು ಭೂತಕೋಲದ ಹಿನ್ನೆಲೆಯೊಂದಿಗೆ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಈ ಚಿತ್ರವು ಮಲಯಾಳಂ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.