‘ಕಾಂತಾರ-1’ ಕ್ರೇಜ್‌ನ ವಿವಾದ: ದೈವದ ವೇಷ ಧರಿಸಿ ಥಿಯೇಟರ್‌ನಲ್ಲಿ ನರ್ತಿಸಿದ ಅಭಿಮಾನಿ!

Date:

spot_img

ಚೆನ್ನೈ: ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ ಚಾಪ್ಟರ್‌ -1’ (Kantara Chapter 1) ಚಿತ್ರವು ದೇಶಾದ್ಯಂತ ಮತ್ತು ವಿಶ್ವದ 30 ದೇಶಗಳಲ್ಲಿ ಭಾರಿ ಪ್ರದರ್ಶನ ಕಾಣುತ್ತಿದ್ದರೂ, ಈ ಕ್ರೇಜ್‌ ಈಗ ವಿವಾದಕ್ಕೆ ಕಾರಣವಾಗಿದೆ.

ಇತ್ತೀಚೆಗೆ ‘ಕಾಂತಾರ’ದ ಪ್ರಭಾವದಿಂದ ವ್ಯಕ್ತಿಯೊಬ್ಬ ದೈವದಂತೆ ವರ್ತಿಸಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಅದೇ ರೀತಿ, ತಮಿಳುನಾಡಿನ ದಿಂಡಿಗಲ್‌ನ ಉಮಾ ರಾಜೇಂದ್ರ ಥಿಯೇಟರ್‌ನಲ್ಲಿ ಚಿತ್ರ ಪ್ರದರ್ಶನದ ಸಮಯದಲ್ಲಿ, ದೈವದ ವೇಷ ಧರಿಸಿದ ಅಭಿಮಾನಿಯೊಬ್ಬರು ಥಿಯೇಟರ್ ಒಳಗೆ ನುಗ್ಗಿ ನರ್ತನ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕವಾಗಿ ವೈರಲ್‌ ಆಗಿದ್ದು, ಇದು ಕರಾವಳಿ ಭಾಗದ ಆರಾಧಕರು ಮತ್ತು ತುಳುನಾಡಿನ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

kantara-chapter-11

ತುಳುನಾಡಿನಿಂದ ತೀವ್ರ ಆಕ್ಷೇಪ

ದೈವಾರಾಧನೆಯನ್ನು ಪವಿತ್ರ ಆಚರಣೆಯೆಂದು ನಂಬುವ ಜನರು, ಈ ವಿಡಿಯೋವನ್ನು ನೋಡಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ:

  • “ಇದು ತುಂಬಾ ತಪ್ಪು. ಜನರು ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ದಯವಿಟ್ಟು ಇದನ್ನು ನಿಲ್ಲಿಸಿ. ತುಳುವರಿಗೆ, ಇದು ಪವಿತ್ರ ಮತ್ತು ನಮ್ಮ ಜೀವನದ ಭಾಗವಾಗಿದೆ,” ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  • “ನಾವು ದೈವಾರಾಧನೆಯನ್ನು ಗೌರವಿಸುವ ರೀತಿ ಇದೇನಾ? ಪವಿತ್ರ ಸಂಪ್ರದಾಯವನ್ನು ಕೇವಲ ಮನರಂಜನೆಯಾಗಿ ಪರಿವರ್ತಿಸುವುದು ನಿಜವಾದ ಅಗೌರವ. ಮುಂದಿನ ಪೀಳಿಗೆ ಇದನ್ನೇ ನೋಡಬೇಕೆಂದು ನಾವು ಬಯಸುತ್ತೇವೆಯೇ?” ಎಂದು ಮತ್ತೊಬ್ಬರು ರಿಷಬ್‌ ಶೆಟ್ಟಿ ಅವರಿಗೆ ಪ್ರಶ್ನಿಸಿದ್ದಾರೆ.
  • “ಇದು ಇಲ್ಲಿನ (ತುಳುನಾಡಿನ) ನಂಬಿಕೆ ವಿಚಾರ, ನಾಟಕ ಅಥವಾ ಪ್ರದರ್ಶನದ ವಿಷಯವಲ್ಲ. ದಯವಿಟ್ಟು ಹೀಗೆ ಮಾಡುವುದನ್ನು ನಿಲ್ಲಿಸಿ. ಚಿತ್ರತಂಡ ಈ ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಕೆಲವರು ಆಗ್ರಹಿಸಿದ್ದಾರೆ.
Kantara

ಬಾಕ್ಸಾಫೀಸ್‌ನಲ್ಲಿ ದಾಖಲೆ

‘ಕಾಂತಾರ -1’ ಚಿತ್ರವು ವಿವಾದಗಳ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ಯಶಸ್ವಿಯಾಗಿದ್ದು, ಈಗಾಗಲೇ ಮೂರೇ ದಿನದಲ್ಲಿ ₹160 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಚಿತ್ರದಲ್ಲಿ ರಿಷಬ್ ಜೊತೆಗೆ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶಾಲಾ-ಆಸ್ಪತ್ರೆಗಳಲ್ಲಿ ಜಂಕ್ ಫುಡ್ ನಿಷೇಧ: ಯು.ಟಿ. ಖಾದರ್ ಎಚ್ಚರಿಕೆ

ರಾಜ್ಯದ ಎಲ್ಲಾ ಶಾಲೆ ಮತ್ತು ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಗುಳಗಳು ಅಶ್ಲೀಲತೆಯಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸಾಮಾನ್ಯ ಬೈಗುಳಗಳು ಕಾನೂನಿನ ಪ್ರಕಾರ ಅಶ್ಲೀಲತೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮೂಡಬಿದಿರೆಯಲ್ಲಿ ವಿವಾಹಿತೆ ಆತ್ಮಹತ್ಯೆ | ಕಾರಣದ ಪತ್ತೆಗೆ ಪೊಲೀಸ್ ತನಿಖೆ

ಮೂಡಬಿದಿರೆಯ ಕುಬೇರು ಗ್ರಾಮದಲ್ಲಿ ವಿವಾಹಿತೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಕಾಂಗ್ರೆಸ್ ನಾಟಕಕ್ಕೆ ಬಿಜೆಪಿ ತಿರುಗೇಟು

ಕಾರ್ಕಳದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅವರ ತೀಕ್ಷ್ಣ ರಾಜಕೀಯ ತಿರುಗೇಟಿನ ಪೂರ್ಣ ಮಾಹಿತಿ ಇಲ್ಲಿದೆ ಓದಿ.