ಜೆಸಿಐ ಕಾರ್ಕಳ ರೂರಲ್ ವತಿಯಿಂದ ವಲಯ ನಿರ್ದೇಶಿತ ಆರೋಹಣ ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳ ಸಪ್ತಾಹದ ಹೂರಣ ಇದರ ಅಂಗವಾಗಿ ಆಹಾರ - ವಿಹಾರ , ಆಚಾರ - ವಿಚಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಮತ್ತು ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ್ಯ ವಿಕಸನ ಕುರಿತ ಮೊದಲ ವಿಶೇಷ ತರಬೇತಿ ಕಾರ್ಯಕ್ರಮ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು , ಕಾಬೆಟ್ಟು ಕಾರ್ಕಳ ಇಲ್ಲಿ ಯಶಸ್ವಿಯಾಗಿ ನಡೆಯಿತು.
ರಾಜ್ಯ ಹೆದ್ದಾರಿ ಭಾಗದ ಬಿಳಾಲಖಂಡ ಗ್ರಾಮದ ಸಾಗರ ರಸ್ತೆ ಕ್ರಾಸ್ ಬಳಿ ಬೆಳಗಿನ ಜಾವ ದರೋಡೆಗೆ ಸಂಚು ರೂಪಿಸಿದ್ದ ಕುಖ್ಯಾತ 'ಗರುಡ ಗ್ಯಾಂಗ್'ನ ಐವರ ಪೈಕಿ ಮೂವರು ಪೊಲೀಸರ ಬದ್ಧ ಕಾರ್ಯಾಚರಣೆಯಲ್ಲಿ ಬಂಧಿತರಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕೋಡಿಕಲ್ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ರಾಜ ಕಾಲುವೆಗೆ ಬಿದ್ದ ಪರಿಣಾಮವಾಗಿ ಕಾರು ಚಾಲಕನಾಗಿದ್ದ ಫೋಟೋಗ್ರಾಫರ್ ಸಾವನ್ನಪ್ಪಿದ್ದಾರೆ.
ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಪರಿಚಯಸ್ಥರೆಂದು ಹೇಳಲಾಗುತ್ತಿರುವ ಇಬ್ಬರು ಯುವಕರು 28 ವರ್ಷದ ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೇ 25ರ ರಾತ್ರಿ ನಡೆದಿದೆ.
1995 ರಿಂದ ಪ್ರಾರಂಭವಾದ ಕನ್ನಡ ಮಾಧ್ಯಮದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು ಎಂದು ಗಮನ ಸೆಳೆಯುವ ಸೂಚನೆ ಮಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಂದ ಅನುದಾನ ನೀಡುವ ಭರವಸೆ ಪಡೆಯುವಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಯಶಸ್ವಿಯಾದರು.