ಭೀಕರ ಸುಂಟರಗಾಳಿಯಿಂದ ಕಾಪು ಮತ್ತು ಕಾರ್ಕಳ ತಾಲೂಕಿನಾದ್ಯಂತ ಆಗಿರುವ ಹಾನಿಗೆ ತುರ್ತು ಪರಿಹಾರ ಒದಗಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆಗ್ರಹ

Date:

spot_img

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರು ಮತ್ತು ಕಾರ್ಕಳ ತಾಲೂಕಿನ ಬೆಳ್ಮಣ್, ನಂದಳಿಕೆ, ಸೂಡ, ರೆಂಜಾಳ, ಬೈಲೂರು, ಯರ್ಲಪಾಡಿ ಮುಂತಾದ ಪ್ರದೇಶಗಳಲ್ಲಿ ಆ.18ರಂದು ಬೀಸಿದ ಬೀಕರ ಸುಂಟರ ಗಾಳಿಯಿಂದ ಸುಮಾರು ಒಂದೂವರೆ ಕಿ.ಮೀ. ಅಗಲ ಹಾಗೂ ಏಳೆoಟು ಕಿ.ಮೀ. ಉದ್ದಕ್ಕೆ ಸಾಲು ಸಾಲು ಮರಗಳು ಉರುಳಿ ಬಿದ್ದು ಅನೇಕ ಮನೆಗಳು ಮತ್ತು ಆಸ್ತಿ ಪಾಸ್ತಿಗೆ ಅಪಾರ ಹಾನಿ ಸಂಭವಿಸಿದ್ದು, ಸದ್ರಿ ಪ್ರಕೃತಿ ವಿಕೋಪವನ್ನು ಜಿಲ್ಲೆಯ ವಿಶೇಷ ಪ್ರಕರಣವೆಂದು ಪರಿಗಣಿಸಿ ಆದ್ಯತೆ ಮೇರೆಗೆ ತುರ್ತು ಪರಿಹಾರವನ್ನು ಒದಗಿಸುವಂತೆ, ಸ್ಥಳಕ್ಕೆ ಬೇಟಿ ನೀಡಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾರ್ಕಳ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಬೆಳ್ಮಣ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿಯೂ ಸದ್ರಿ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಿ ತುರ್ತು ಅನುದಾನವನ್ನು ಮಂಜೂರು ಮಾಡುವರೆ ಶಿಫಾರಸು ಮಾಡುವಂತೆ ಅವರು ಒತ್ತಾಯಿಸಿದರು.

ಇದರೊಂದಿಗೆ ಹಲವಾರು ವಿದ್ಯುತ್ ಕಂಬಗಳು ಕೂಡಾ ಧರಾಶಾಯಿಯಾಗಿದ್ದು, ಸಂಬಂಧಪಟ್ಟ ಇಲಾಖೆ ಮೂಲಕ ತುರ್ತು ಪರಿಹಾರ ಮಾರ್ಗೋಪಾಯವನ್ನು ಒದಗಿಸುವಂತೆ ಕುತ್ಯಾರು ಮನವಿ ಮಾಡಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೋಳ, ಪಕ್ಷದ ಪ್ರಮುಖರಾದ ಶಿವರಾಮ ಭಂಡಾರಿ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ