ಡಾರ್ಕ್ ಅಂಡರ್‌ಆರ್ಮ್ಸ್ ಸಮಸ್ಯೆಯೇ? ಕಪ್ಪಾದ ಕಂಕುಳನ್ನು ಬೆಳ್ಳಗಾಗಿಸಲು ಇಲ್ಲಿದೆ ಸುಲಭ ಮನೆಮದ್ದುಗಳು!

Date:

spot_img

ಸ್ಲೀವ್‌ಲೆಸ್ ಮತ್ತು ಆಫ್-ಶೋಲ್ಡರ್ ಟಾಪ್‌ಗಳನ್ನು ಧರಿಸುವ ಆಸೆಯಿದ್ದರೂ, ಕಂಕುಳಿನ ಕೆಳಭಾಗದ ಕಪ್ಪಾದ ಚರ್ಮದಿಂದಾಗಿ ಅನೇಕ ಯುವತಿಯರು ಹಿಂಜರಿಯುತ್ತಾರೆ. ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದರೆ, ರಾಸಾಯನಿಕಯುಕ್ತ ಕ್ರೀಮ್‌ಗಳು, ಶೇವಿಂಗ್ ಅಥವಾ ದುಬಾರಿ ಚಿಕಿತ್ಸೆಗಳ ಅಗತ್ಯವಿಲ್ಲ. ಮನೆಯಲ್ಲೇ ಸರಳವಾಗಿ ಮಾಡಬಹುದಾದ ಈ ಪರಿಹಾರಗಳನ್ನು ಪ್ರಯತ್ನಿಸಿ.

ಅಡಿಗೆ ಸೋಡಾ

ಕಂಕುಳಿನ ಕಪ್ಪನ್ನು ಹೋಗಲಾಡಿಸಲು, ಅಡಿಗೆ ಸೋಡಾಕ್ಕೆ ನೀರು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಚರ್ಮಕ್ಕೆ ಹಚ್ಚಿ ಕೈಗಳಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಕಪ್ಪು ಕಲೆ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ತೆಂಗಿನ ಎಣ್ಣೆ

ಕಂಕುಳಿನ ಕಪ್ಪು ಕಲೆ ನಿವಾರಣೆಗೆ ತೆಂಗಿನೆಣ್ಣೆಯಲ್ಲಿ ವಿಟಮಿನ್ ಇ ಕ್ಯಾಪ್ಸೂಲ್‌ಗಳನ್ನು ಬೆರೆಸಿ ಚರ್ಮಕ್ಕೆ ಹಚ್ಚುವುದು ಉತ್ತಮ. ಸ್ನಾನಕ್ಕೆ ಸುಮಾರು 1 ಗಂಟೆ ಮೊದಲು ಪ್ರತಿದಿನ ಈ ಮಿಶ್ರಣವನ್ನು ಹಚ್ಚಿ, ನಂತರ ಉಗುರುಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿ.

ನಿಂಬೆ ರಸ

ನಿಂಬೆಹಣ್ಣು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳನ್ನು ಹೊಂದಿದೆ. ಒಂದು ನಿಂಬೆಹಣ್ಣನ್ನು ಮಧ್ಯದಿಂದ ಕತ್ತರಿಸಿ ನಿಮ್ಮ ಕಂಕುಳಲ್ಲಿ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ, ನಂತರ ಸ್ನಾನ ಮಾಡಿ. ನಿಂಬೆಯನ್ನು ಅನ್ವಯಿಸಿದ ನಂತರ ಮಾಯಿಶ್ಚರೈಸರ್ ಅನ್ನು ಹಚ್ಚಲು ಮರೆಯಬೇಡಿ, ಏಕೆಂದರೆ ನಿಂಬೆ ಚರ್ಮವನ್ನು ಒಣಗಿಸಬಹುದು.

ಈ ಸರಳ ಮನೆಮದ್ದುಗಳ ನಿಯಮಿತ ಬಳಕೆಯಿಂದ ಕಪ್ಪಾದ ಕಂಕುಳಿನ ಚರ್ಮವನ್ನು ತಿಳಿಗೊಳಿಸಬಹುದು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.