
ಉಡುಪಿ : ಕ್ಷೇತ್ರದಲ್ಲಿ ಶ್ರದ್ಧೆ , ಭಕ್ತಿ , ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಉಡುಪಿ ಅನಂತೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶಿವ ಪಂಚಾಕ್ಷರಿ ಜಪ ಸಂಕಲ್ಪವನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀಗಳ ಸಮ್ಮುಖದಲ್ಲಿ ನಡೆಸಲಾಯಿತು.

ಈ ಪವಿತ್ರ ಸಂಕಲ್ಪಕ್ಕೆ ಪರ್ಯಾಯ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ಧರ್ಮಸ್ಥಳಕ್ಕೂ ಉಡುಪಿಯ ಅನಂತೇಶ್ವರಕ್ಕೂ ವಾದಿರಾಜ ಸಾರ್ವಭೌಮ ಯತಿಗಳ ಅವಿನಾಭಾವ ಸಂಬಂಧ ಇದೆ. ಕ್ಷೇತ್ರದ ಬಗ್ಗೆ ಅಪಚಾರ ಹಾಗೂ ಅಪಪ್ರಚಾರ ವನ್ನು ನಾವೂ ಕೂಡಾ ಖಂಡಿಸುತ್ತೇವೆ. ಆದಷ್ಟು ಬೇಗ ಈ ಎಲ್ಲ ವಿದ್ಯಮಾನಗಳು ಅಂತಿಮವಾಗಲಿ ಎಂದು ಅನಂತೇಶ್ವರ ದೇವರು ಹಾಗೂ ಶ್ರೀ ಕೃಷ್ಣ ಮುಖ್ಯಪ್ರಾಣ ದೇವರಲ್ಲಿ ಅವರು ಪ್ರಾರ್ಥಿಸಿದರು .

ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷದ್ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ ಆರ್ ಹಾಗೂ ವಿಶ್ವಹಿಂದೂ ಪರಿಷದ್ ಜಿಲ್ಲಾ ಪ್ರಮುಖರು , ಮಾತೃಶಕ್ತಿಯ ಮಾತೆಯರು , ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.