ಗ್ರೀನ್‌ಲ್ಯಾಂಡ್ ಜನರಿಗೆ ಅಮೆರಿಕದ ‘ಕೋಟಿ’ ಆಮಿಷ: ದ್ವೀಪ ವಶಕ್ಕೆ ಟ್ರಂಪ್ ಸರ್ಕಾರದಿಂದ ಹೊಸ ಮಾಸ್ಟರ್ ಪ್ಲ್ಯಾನ್!

Date:

spot_img

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗ್ರೀನ್‌ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳುವ ಹಳೆಯ ಕನಸು ಈಗ ಹೊಸ ರೂಪ ಪಡೆದುಕೊಂಡಿದೆ. ವಿಶ್ವದ ಅತಿದೊಡ್ಡ ದ್ವೀಪವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ವಾಷಿಂಗ್ಟನ್ ಆಡಳಿತವು ಈಗ ‘ಹಣದ ಆಮಿಷ’ದ ಮೊರೆ ಹೋಗಿದೆ ಎಂಬ ಸ್ಫೋಟಕ ವರದಿಗಳು ಹೊರಬಿದ್ದಿವೆ. ಡೆನ್ಮಾರ್ಕ್‌ನಿಂದ ಬೇರ್ಪಟ್ಟು ಅಮೆರಿಕದೊಂದಿಗೆ ವಿಲೀನಗೊಳ್ಳಲು ಅಲ್ಲಿನ ಜನರನ್ನು ಒಪ್ಪಿಸಲು ಭಾರಿ ಮೊತ್ತದ ನಗದು ಪ್ಯಾಕೇಜ್ ಘೋಷಿಸಲು ಶ್ವೇತಭವನ ಸಿದ್ಧತೆ ನಡೆಸುತ್ತಿದೆ.

ಗ್ರೀನ್‌ಲ್ಯಾಂಡ್‌ನಲ್ಲಿ ವಾಸಿಸುವ ಸುಮಾರು 57,000 ನಾಗರಿಕರಲ್ಲಿ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ಡಾಲರ್ (ಅಂದಾಜು 90 ಲಕ್ಷ ರೂಪಾಯಿ) ನೀಡುವ ಬಗ್ಗೆ ಅಮೆರಿಕದ ಉನ್ನತ ಅಧಿಕಾರಿಗಳು ಗಂಭೀರ ಚರ್ಚೆ ನಡೆಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಒಟ್ಟು ಯೋಜನೆಗೆ ಅಮೆರಿಕ ಸರ್ಕಾರ ಸುಮಾರು 5,000 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣವನ್ನು ವ್ಯಯಿಸಲು ಸಿದ್ಧವಿದೆ ಎನ್ನಲಾಗಿದೆ. ಗ್ರೀನ್‌ಲ್ಯಾಂಡ್‌ನಲ್ಲಿರುವ ಅಪಾರ ಪ್ರಮಾಣದ ನೈಸರ್ಗಿಕ ಖನಿಜ ಸಂಪತ್ತು ಮತ್ತು ಭವಿಷ್ಯದ ರಕ್ಷಣಾ ನೀತಿಯ ದೃಷ್ಟಿಯಿಂದ ಈ ದ್ವೀಪ ಅಮೆರಿಕಕ್ಕೆ ಅತಿ ಮುಖ್ಯವಾಗಿದೆ.

ಆದರೆ, ಈ ಬೆಳವಣಿಗೆಗೆ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಆಡಳಿತ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ” ಎಂದು ಸ್ಪಷ್ಟಪಡಿಸಿರುವ ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್, ಒಂದು ವೇಳೆ ಅಮೆರಿಕ ತನ್ನ ಸೇನಾ ಬಲ ಬಳಸಿ ದ್ವೀಪವನ್ನು ವಶಪಡಿಸಿಕೊಳ್ಳಲು ಯತ್ನಿಸಿದರೆ, ಮೇಲಧಿಕಾರಿಗಳ ಆದೇಶಕ್ಕೆ ಕಾಯದೆ ನೇರ ಗುಂಡಿನ ದಾಳಿ ನಡೆಸುವಂತೆ ತನ್ನ ಸೈನ್ಯಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಣದ ಆಮಿಷವು ಒಂದು ರೀತಿಯ ‘ಆರ್ಥಿಕ ಆಕ್ರಮಣ’ ಎಂದು ಯುರೋಪಿಯನ್ ರಾಷ್ಟ್ರಗಳು ಕಿಡಿಕಾರಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.