ಬೃಹತ್ ಗೀತೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Date:

spot_img

ಪೂಜ್ಯ ಶ್ರೀ ಪುತ್ತಿಗೆ ಶ್ರೀಪಾದರ ವಿಶ್ವ ಗೀತಾ ಪರ್ಯಾಯ ಎಂದೇ ಖ್ಯಾತವಾದ ಚತುರ್ಥ ಪರ್ಯಾಯದ ಬೃಹತ್ ಗೀತೋತ್ಸವ ಕಾರ್ಯಕ್ರಮ ನವೆಂಬರ್ 8ರಿಂದ ಒಂದು ತಿಂಗಳ ಕಾಲ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಅಪೂರ್ವವಾದ ಲಕ್ಷಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಅಲ್ಲದೆ ಅನೇಕ ಸಂತರು ಈ ಉತ್ಸವದಲ್ಲಿ ಪಾಲ್ಗ್ಗೊಂಡು ಗೀತಾ ಸಂದೇಶ ನೀಡಲಿದ್ದಾರೆ. ವೈವಿಧ್ಯಮಯವಾಗಿ ಸರ್ವ ಜನರ ಸಮಾಗಮದೊಂದಿಗೆ ನಡೆಯಲಿರುವ ಈ ಉತ್ಸವದ ರೂಪುರೇಷೆ ಕುರಿತಂತೆ ಅನೇಕ ಸಂಘ ಸಂಸ್ಠೆಗಳ ಪ್ರಮುಖರ ಸಭೆಗಳು ಈಗಾಗಲೇ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿದ್ದು ಬುಧವಾರ ಸಂಘ ಪರಿವಾರದ ಸದಸ್ಯರನ್ನು ಒಳಗೊಂಡ ಪೂರ್ವಭಾವಿ ಸಭೆ ಕನಕ ಮಂಟಪದಲ್ಲಿ ಶ್ರೀ ಪುತ್ತಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು. ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರು ಮಾತನಾಡಿ ಗೀತಾಚಾರ್ಯ ಶ್ರೀಕೃಷ್ಣನ ಉಡುಪಿಯಲ್ಲಿ ಭಗವದ್ಗೀತೆಯ ಸಂದೇಶವನ್ನು ಸಾಕಷ್ಟು ವಿಸ್ತೃತವಾಗಿ ನಾವು ಮಾಡುತ್ತಿದ್ದು ಲಕ್ಷಾಂತರ ಮಂದಿ ಈಗಾಗಲೇ ಕೋಟಿ ಗೀತಾ ಲೇಖನಯಜ್ಞದಲ್ಲಿ ಭಾಗವಹಿಸಿದ್ದು ನಮಗೆ ಅತೀವ ಸಂತಸ ತಂದಿದೆ.
ಆ ಪ್ರಯುಕ್ತ ನಡೆಯಲಿರುವ ಈ ಬೃಹತ್ ಗೀತೋತ್ಸವದಲ್ಲಿ ಭಗವದ್ಗೀತೆಯ ತತ್ತ್ವವನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಪ್ರಧಾನ ಮಂತ್ರಿ‌ ಮೋದಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ರೀಕೃಷ್ಣನ ಸಂಕಲ್ಪವಾಗಿದೆ. ಈ ಕಾರ್ಯಕ್ರಮವನ್ನು ಉಡುಪಿಯ ಸುತ್ತಮುತ್ತಲಿನ ಎಲ್ಲ ಜನರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಗೀತಾಚಾರ್ಯ ಶ್ರೀಕೃಷ್ಣ ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗಬೇಕೆಂದು ಆಶಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀಪಾದರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ ಮತ್ತು ಗುರ್ಮೆ ಸುರೇಶ ಶೆಟ್ಟಿ, ಬಿಜೆಪಿ ಜಿಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಕಿದಿಯೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹ ವಾದಿರಾಜದ, ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾರ್ಯಕ್ರಮ ಸಂಚಸಲಕ ಬೈಕಾಡಿ ಸುಪ್ರಸಾದ ಶೆಟ್ಟಿ ಮೊದಲಾದವರಿದ್ದರು.

ಪುತ್ತಿಗೆ ಮಠ ದಿವಾನರಾದ ನಾಗರಾಜ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮದ ವಿವರ ನೀಡಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.