ಯುನಿಯನ್ ಬ್ಯಾಂಕ್ ಸಿಬ್ಬಂದಿ ಎಂದು ಕರೆ ಮಾಡಿ ಕೆ ವೈ ಸಿ ಅಪ್ಡೇಟ್ ನೆಪದಲ್ಲಿ ನಿವೃತ್ತ ನರ್ಸ್ ನ ಖಾತೆಯಿಂದ 5.19 ಲಕ್ಷ ರೂ ಎಗರಿಸಿರುವ ಪ್ರಕರಣ

Date:

spot_img

ಕಾರ್ಕಳ : ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ನಿವೃತ್ತ ನರ್ಸ್‌ರೊಬ್ಬರ ಖಾತೆಯಿಂದ ₹5.19 ಲಕ್ಷ ಎಗರಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ವಿವರ:
ಸಾಣೂರಿನ ಪ್ರೇಮಲತಾ (ವಯಸ್ಸು 58) ಎಂಬವರು ಯುನಿಯನ್ ಬ್ಯಾಂಕ್‌ನ ಗ್ರಾಹಕರಾಗಿದ್ದು, ನಿವೃತ್ತ ನರ್ಸ್ ಆಗಿದ್ದಾರೆ. ಜೂನ್ 26ರಂದು ಅವರು ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದಾಗ, 7076260938 ಎಂಬ ನಂಬರಿನಿಂದ ಕರೆ ಬಂದಿದೆ . ಕರೆ ಮಾಡಿದ ವ್ಯಕ್ತಿ ತನ್ನನ್ನು ಕಾರ್ಕಳ ಸಾಣೂರು ಶಾಖೆಯ ಯುನಿಯನ್ ಬ್ಯಾಂಕ್ ಉದ್ಯೋಗಿಯೆಂದು ಪರಿಚಯಿಸಿಕೊಂಡು, “ನಿಮ್ಮ ಖಾತೆ ಕೆವೈಸಿ ಅಪ್‌ಡೇಟ್ ಆಗಿಲ್ಲ. ಡೆಬಿಟ್ ಕಾರ್ಡ್ ನಂಬರ್ ನೀಡಿ,” ಎಂದು ಕೇಳಿದ್ದ. ಅಧಿಕೃತ ಬ್ಯಾಂಕ್ ಕರೆ ಎಂದು ನಂಬಿದ ಪ್ರೇಮಲತಾ ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ನೀಡಿದ್ದರು. ಬಳಿಕ, ಅದೇ ವ್ಯಕ್ತಿ ಮತ್ತೆ ಕರೆ ಮಾಡಿ “ಅಪ್‌ಡೇಟ್ ಆಗಿದೆ” ಎಂದು ಭರವಸೆ ನೀಡಿದ್ದ. ಆದರೆ, ಅದೇ ದಿನ ರಾತ್ರಿ 8:18 ಕ್ಕೆ ಪ್ರೇಮಲತಾ ಅವರ ಖಾತೆಯಿಂದ ₹2,50,000 ಕಡಿತವಾಯಿತು. ಕೆಲ ನಿಮಿಷಗಳಲ್ಲಿ ಮತ್ತೊಂದು ₹2,50,000 ಮತ್ತು ನಂತರ ₹19,000 ಹಣವೂ ಕಡಿತವಾಗಿದೆ. ಒಟ್ಟು ₹5,19,000 ನಗದು ಅವರ ಖಾತೆಯಿಂದ ಪೋಲಾಗಿರುವುದು ಪತ್ತೆಯಾಗಿದೆ.

ಕಾನೂನು ಕ್ರಮ:
ಈ ಸಂಬಂಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ವಿಭಾಗ ತನಿಖೆ ಆರಂಭಿಸಿದೆ. ಶೀಘ್ರದಲ್ಲಿ ಕರೆ ಮಾಡಿದ ವ್ಯಕ್ತಿಯ ಟ್ರಾನ್ಸಾಕ್ಷನ್ ಹಾದಿ ಹಾಗೂ ಬ್ಯಾಂಕ್ ದಾಖಲೆಗಳನ್ನು ಶೋಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಪೊಲೀಸರ ಎಚ್ಚರಿಕೆ:
ಸಾರ್ವಜನಿಕರು ಈ ರೀತಿಯ ಕರೆಗಳಿಗೆ ಸ್ಪಂದಿಸದೇ, ಯಾವುದೇ ಖಾತೆ ವಿವರಗಳನ್ನು ನೀಡಬಾರದು. ಯಾವುದೇ ಬ್ಯಾಂಕ್ ಉದ್ಯೋಗಿ ದೂರವಾಣಿ ಮೂಲಕ ಖಾತೆ ಸಂಖ್ಯೆ ಅಥವಾ ಕಾರ್ಡ್ ವಿವರ ಕೇಳುವುದಿಲ್ಲ ಎಂಬುದನ್ನು ಪೊಲೀಸ್ ಇಲಾಖೆ ಎಚ್ಚರಿಕೆಯ ರೂಪದಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ ‘ರೆಡ್ಮಿ ಟರ್ಬೊ 5’: ಜೂನ್ 16ಕ್ಕೆ ಗ್ರ್ಯಾಂಡ್ ಎಂಟ್ರಿ

ಜೂನ್ 16ಕ್ಕೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ರೆಡ್ಮಿ ಟರ್ಬೊ 5. 7,540mAh ಬ್ಯಾಟರಿ, ಡೈಮೆನ್ಸಿಟಿ 8500 ಅಲ್ಟ್ರಾ ಪ್ರೊಸೆಸರ್‌ನ ಫುಲ್ ಡೀಟೇಲ್ಸ್ ಇಲ್ಲಿದೆ.

ದಿನ ವಿಶೇಷ – ಸೋಮವತಿ ಅಮವಾಸ್ಯೆ ದಿನ

ಜೂನ್ 15, 2026 ರ ಸೋಮವತಿ ಅಮವಾಸ್ಯೆಯಂದು 4 ಶುಭ ಯೋಗಗಳು ಒಟ್ಟಿಗೆ ಬರಲಿವೆ. ಈ ದಿನದ ಮಹತ್ವ, ಆಚರಣೆ ಮತ್ತು ಪೂಜಾ ವಿಧಾನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೌವನದ ಕನ್ನಡಿ: ವಯಸ್ಸಾಗುವ ಮುನ್ನವೇ ಮುಖದಲ್ಲಿ ಸುಕ್ಕು ಮೂಡುತ್ತಿದೆಯೇ? ಈ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ

ವಯಸ್ಸಾಗುವ ಮುನ್ನವೇ ಮುಖದಲ್ಲಿ ಮೂಡುವ ಸುಕ್ಕು ಹಾಗೂ ನೆರಿಗೆಗಳನ್ನು ತಡೆಯಲು ಅಕ್ಕಿಹಿಟ್ಟು ಮತ್ತು ಅಗಸೆಬೀಜದ ಈ ವಿಶೇಷ ಫೇಸ್ ಪ್ಯಾಕ್ ಬಳಸಿ. ನಿಮ್ಮ ಚರ್ಮದ ಯೌವನ ಕಾಪಾಡಿಕೊಳ್ಳಿ.

ವಿಶ್ವ ರಕ್ತದಾನಿಗಳ ದಿನ: ರಕ್ತದಾನದ ಮಹತ್ವ ಮತ್ತು ನಿಯಮಗಳು

ವಿಶ್ವ ರಕ್ತದಾನಿಗಳ ದಿನದ ಮಹತ್ವ, ರಕ್ತದಾನದ ಆರೋಗ್ಯ ಪ್ರಯೋಜನಗಳು ಹಾಗೂ ಯಾರೆಲ್ಲ ರಕ್ತದಾನ ಮಾಡಬಹುದು ಮತ್ತು ಮಾಡಬಾರದು ಎಂಬ ಪೂರ್ಣ ಮಾಹಿತಿ ಇಲ್ಲಿದೆ ಓದಿ.