
ಇನ್ನಂಜೆ : ಇನ್ನಂಜೆ ಎಸ್.ವಿ.ಎಚ್.ಕನ್ನಡ ಮಾಧ್ಯಮ ಪ್ರೌಢ ಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ರಂಗಕರ್ಮಿ, ಉಪನ್ಯಾಸಕರಾದ ಗಣೇಶ್ ರಾವ್ ಎಲ್ಲೂರು ಇವರು ಉದ್ಘಾಟಿಸಿದರು. “ಜೀವನದಲ್ಲಿ ಶಿಸ್ತನ್ನು ಕಾಪಾಡಲು ಪ್ರೌಢ ಶಾಲಾ ಹಂತದಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ತಮ್ಮನ್ನು ಸಂಸತ್ತಿನ ಕಲಾಪಗಳಲ್ಲಿ ತೊಡಗಿಸಿಕೊಂಡಾಗ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ” ಎಂಬುದಾಗಿ ಹೇಳಿ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಶಾಲಾ ಮುಖ್ಯೋಪಾದ್ಯಾಯರಾದ ನಟರಾಜ ಉಪಾದ್ಯಾಯ ವಹಿಸಿಕೊಂಡರು. ವಿವಿಧ ಹುದ್ದೆಗಳನ್ನು ವಹಿಸಿಕೊಂಡ ವಿದ್ಯಾರ್ಥಿಗಳಿಗೆ ಡಾ| ಯೋಗೇಶಪ್ಪ ಪ್ರಮಾಣ ವಚನ ಭೋದಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕರಾದ ನವೀನ್ ಶೆಟ್ಟಿ, ಪ್ರಭಾಕರ ಭಟ್, ಪ್ರೇಮಲತಾ, ಅನಿತಾ ಮಥಾಯಸ್ ಹಾಗೂ ವಿದ್ಯಾರ್ಥಿ ನಾಯಕ ಸುಹಾಸ್ ನಾಯಕಿ ಭಾರತಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಗೋಪಾಲ್ ಸ್ವಾಗತಿಸಿ, ಶಶಿಕಲಾ ಕಾರ್ಯಕ್ರಮ ನಿರ್ವಹಿಸಿ ಗಾಯತ್ರಿ ಧನ್ಯವಾದವಿತ್ತರು.