‘ಕೆಜಿಎಫ್ 3 ಖಂಡಿತ ಆಗುತ್ತೆ, ಆದ್ರೆ ಈಗಲ್ಲ’: ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ

Date:

spot_img

ಬೆಂಗಳೂರು: ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರಿಗೆ ಎಲ್ಲಿ ಹೋದರೂ ಎದುರಾಗುವ ಒಂದೇ ಪ್ರಶ್ನೆ ಎಂದರೆ, ತಮ್ಮ ಮಹತ್ವಾಕಾಂಕ್ಷೆಯ ‘ಕೆಜಿಎಫ್ 3’ ಸಿನಿಮಾ ಯಾವಾಗ ಬರುತ್ತೆ? ಎಂಬುದೇ. ಈ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದ ಯಶ್ ಅವರು, ಇದೀಗ ಬಾಲಿವುಡ್ ಸಂದರ್ಶನವೊಂದರಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ನೀಡಿದ್ದಾರೆ.

ಪ್ರಶಾಂತ್ ನೀಲ್ ಜೊತೆ ನಿರಂತರ ಮಾತುಕತೆ

“ಖಂಡಿತವಾಗಿಯೂ ಕೆಜಿಎಫ್ 3 ಸಿನಿಮಾ ಆಗುತ್ತೆ, ಆದರೆ ಈಗಲ್ಲ” ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ತಾನು ಬೇರೆ ಎರಡು ಪ್ರಾಜೆಕ್ಟ್‌ಗಳಲ್ಲಿ ಫುಲ್ ಬ್ಯುಸಿ ಇರುವುದಾಗಿ ತಿಳಿಸಿದ ಅವರು, ಕೆಜಿಎಫ್ ನಿರ್ದೇಶಕರಾದ ಪ್ರಶಾಂತ್ ನೀಲ್ ಕೂಡ ತಮ್ಮ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದಿದ್ದಾರೆ.

“ನಾವಿಬ್ಬರೂ ಕಾಲ್ ಮಾಡಿ ಮಾತನಾಡುವಾಗ ಈ ಕೆಜಿಎಫ್ 3 ಮಾಡುವ ಬಗ್ಗೆ ಮಾತನಾಡುತ್ತೇವೆ. ಇಬ್ಬರಿಗೂ ಕೆಜಿಎಫ್ ಸಿನಿಮಾ ಮಾಡುವ ಬಗ್ಗೆ ತುಂಬಾ ಆಸಕ್ತಿಯಿದೆ. ಆದರೆ, ಇಬ್ಬರೂ ಆ ಬಗ್ಗೆ ಸಂಪೂರ್ಣ ಗಮನ ಕೊಡಬೇಕಿದೆ. ಆದ್ದರಿಂದ ಸದ್ಯ ನಮ್ಮನಮ್ಮ ಕೈನಲ್ಲಿರುವ ಬೇರೆ ಸಿನಿಮಾಗಳು ಮುಗಿದ ಮೇಲಷ್ಟೇ ಆ ಸಿನಿಮಾ ಶುರುವಾಗಲಿದೆ,” ಎಂದು ಅವರು ತಿಳಿಸಿದ್ದಾರೆ.

ಹೊಸ ದಾಖಲೆ ಬರೆಯಬೇಕು

ಯಶ್ ಅವರು, ಕೆಜಿಎಫ್ ಸಿನಿಮಾ ಮೇಲಿರುವ ಕ್ರೇಜ್ ಮತ್ತು ಜನರ ನಂಬಿಕೆಯನ್ನು ‘ಎನ್‌ಕ್ಯಾಶ್’ ಮಾಡಿಕೊಳ್ಳುವ ಬಗ್ಗೆ ನಮಗೆ ಆಸಕ್ತಿ ಇಲ್ಲ. ಆದರೆ, “ಕೆಜಿಎಫ್ ಸಿನಿಮಾ ತೆರೆಗೆ ತಂದಾಗ ಅದು ಈ ಮೊದಲಿನ ಎರಡೂ ಸಿನಿಮಾಗಳನ್ನೂ ಮೀರಿಸುವಂತಿರಬೇಕು. ಅದೆಷ್ಟು ಮಾಸಿವ್ ಆಗಿರಬೇಕು ಎಂದರೆ, ಅದೊಂದು ಹೊಸ ದಾಖಲೆ ಬರೆಯಬೇಕು. ಅಷ್ಟೇ ಅಲ್ಲ, ಜನರ ನಿರೀಕ್ಷೆಯನ್ನೂ ಮೀರಿ ಅದು ಮೂಡಿ ಬರಬೇಕು. ಹೀಗಾಗಿ, ಇಬ್ಬರೂ ಸಮಯ ಮಾಡಿಕೊಂಡು ಆ ಸಿನಿಮಾವನ್ನು ಖಂಡಿತವಾಗಿಯೂ ಮಾಡುತ್ತೇವೆ. ಆದರೆ, ಕಾಲ ಕೂಡಿ ಬಂದಾಗಲಷ್ಟೇ ಅದು ಸಾಧ್ಯ,” ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.