
ಉಡುಪಿ : ಕಸಕಡ್ಡಿ ಹಿಡಿಸೂಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಅಮಾನವೀಯ ರೀತಿಯಲ್ಲಿದ್ದ ಹೊರ ರಾಜ್ಯದ ಮನೋರೋಗಿ ಯುವಕನನ್ನು ಮಂಜೇಶ್ವರ ಸ್ನೇಹಾಲಯ ಆಶ್ರಮಕ್ಕೆ ಪುನರ್ವಸತಿಗೆ ದಾಖಲಿಸಲಾಗಿದೆ.
ರಕ್ಷಣಾ ಸಮಯದಲ್ಲಿ ಆಶ್ರಮದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತಾ ಸ್ವತಃ ಹಾಜರಿದ್ದು ಕಿರಣ್ ಕುಮಾರ್ ಸಿ ಜೆ ಹಾಗೂ ವಿಶು ಶೆಟ್ಟಿ ಅಂಬಲಪಾಡಿ ಸಹಕರಿಸಿದರು. ಇಂತಹ ಮನುಜನ ಮೇಲಿನ ಅನುಕಂಪವು ನಿಜವಾಗಿಯೂ ಆಶ್ರಮದ ಮುಖ್ಯಸ್ಥರ ನಿಜವಾದ ಮಾನವೀಯ ಸೇವೆಯಾಗಿದೆ.