
ಪಳ್ಳಿ : ವಿಶ್ವ ಪರಿಸರ ದಿನದ ಪ್ರಯುಕ್ತ ಶ್ರೀ ಮಹಾಕಾಳಿ ಭಜನಾ ಮಂಡಳಿ ಮಂಗಲ್ದಿ ಮಠ ಪಳ್ಳಿ, ಕಾಮಧೇನು ಸ್ವ ಸಹಾಯ ಸಂಘ ಪಳ್ಳಿ, ಶೌರ್ಯ ವಿಪತ್ತು ಪಳ್ಳಿ ಘಟಕ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಮಂಗಲ್ದಿ ಮಠ ದೇವಸ್ಥಾನದ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಶ್ರೀಕಾಂತ್ ಪ್ರಭುರವರು ಪ್ರಾಸ್ತವಿಕದೊಂದಿಗೆ ಸ್ವಾಗತಗೈದರು. ಕ್ಷೇತ್ರದ ಅರ್ಚಕರಾದ ಗಣಪತಿ ಭಟ್ ಮಾತನಾಡಿ “ಮಕ್ಕಳ ಕೈಯಿಂದ ಗಿಡ ನಾಟಿ ಮಾಡಿಸಿ ಅರಿವು ಮೂಡಿಸುವುದರೊಂದಿಗೆ ಮುಂದೆ ಅವರು ಈ ಕಾರ್ಯವನ್ನು ಮುಂದುವರೆಸಬೇಕು ಎಂಬ ಮಹತ್ತರ ಚಿಂತನೆ ಭವಿಷ್ಯದ ಬಗ್ಗೆ ಕಾಳಜಿಯ ಕಾರ್ಯಕ್ರಮವಾಗಿದೆ” ಎಂದರು.

ಈ ವೇಳೆ ಭಜನಾ ಮಂಡಳಿಯ ಅಧ್ಯಕ್ಷರಾದ ಸಚಿನ್ ಬಂಗೇರ , ಗ್ರಾಮಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬ್ರಿಜೇಶ್, ಪಳ್ಳಿ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಆಚಾರ್ಯ, ಒಕ್ಕೂಟದ ಸೇವಾ ಪ್ರತಿನಿಧಿ ಆಶಾಲತಾ, ಒಕ್ಕೂಟದ ಜೊತೆ ಕಾರ್ಯದರ್ಶಿಯಾದ ನಿತಿನ್ ಕರ್ಕೇರ, ಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಗೀತ ನಾಯಕ್, ಭಜನಾ ಮಂಡಳಿಯ ಹಾಗೂ ಶೌರ್ಯ ಘಟಕದ ಸದಸ್ಯರು ಉಪಸ್ಥಿತರಿದ್ದರು.