13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಅನಂತಕೃಷ್ಣ ಪ್ರಭು ಬೆಂಗಳೂರಿನಲ್ಲಿ ಪತ್ತೆ

Date:

spot_img

ಉಡುಪಿ/ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಯುವಕನ ಪತ್ತೆ ಪ್ರಕರಣದಲ್ಲಿ ಪೊಲೀಸರು ಕೊನೆಗೂ ಯಶಸ್ಸು ಸಾಧಿಸಿದ್ದಾರೆ. ದೀರ್ಘಕಾಲದಿಂದ ಬಗೆಹರಿಯದಿದ್ದ ಈ ಪ್ರಕರಣದ ‘ದೊಡ್ಡ ಬೀಗ’ ಕೊನೆಗೂ ತೆರೆದಿದೆ.

ದಿನಾಂಕ 06 ಡಿಸೆಂಬರ್ 2012ರಂದು, ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ನಿವಾಸಿ ಪ್ರಭಾಕರ ಪ್ರಭು ಅವರ ಮಗ ಅನಂತ ಕೃಷ್ಣ ಪ್ರಭು (ಆಗ 16 ವರ್ಷದವನು) ಮನೆಯಿಂದ ದೇವಸ್ಥಾನಕ್ಕೆ ಹೋಗಿ ನಾಪತ್ತೆಯಾಗಿದ್ದ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಶೇಷ ತಂಡದಿಂದ ಯಶಸ್ವಿ ಕಾರ್ಯಾಚರಣೆ

ಕಳೆದ 13 ವರ್ಷಗಳಿಂದ ತನಿಖೆ ನಡೆಯುತ್ತಿದ್ದ ಈ ಪ್ರಕರಣವನ್ನು ವಿಶೇಷ ತನಿಖಾ ತಂಡವು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ, ಕೊನೆಗೂ ಯಶಸ್ವಿಯಾಗಿದೆ. ನಾಪತ್ತೆಯಾಗಿದ್ದ ಅನಂತ ಕೃಷ್ಣ ಪ್ರಭು, ಈಗ 29 ವರ್ಷದ ಯುವಕನಾಗಿ, ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.

ಉಡುಪಿ ಉಪವಿಭಾಗದ ಡಿವೈಎಸ್‌ಪಿ ಪ್ರಭು ಡಿ.ಟಿ. ಅವರ ಮಾರ್ಗದರ್ಶನದಲ್ಲಿ, ಬ್ರಹ್ಮಾವರ ಪಿಎಸ್‌ಐ ಸುದರ್ಶನ್ ದೊಡಮನಿ, ಉಡುಪಿ ನಗರ ಪಿಎಸ್‌ಐ ಈರಣ್ಣ ಶಿರಗುಂಪಿ ಹಾಗೂ ತಂಡದ ಸದಸ್ಯರಾದ ಹೆಚ್‌ಸಿ ಇಮ್ರಾನ್, ಹೆಚ್‌ಸಿ ಚೇತನ್, ಪಿಸಿ ಸಂತೋಷ್ ದೇವಾಡಿಗ ಮತ್ತು ಪಿಸಿ ಮಲ್ಲಯ್ಯ ಹಿರೇಮಠ ಅವರು ಈ ಯಶಸ್ವಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.