ಕೇರಳದಲ್ಲಿ ಮೋದಿ ಸಂಚಲನ: ಎಲ್ ಡಿಎಫ್-ಯುಡಿಎಫ್ ಭ್ರಷ್ಟಾಚಾರಕ್ಕೆ ಪ್ರಧಾನಿ ಬ್ರೇಕ್!

Date:

spot_img

ತಿರುವನಂತಪುರಂ: ಕೇರಳದ ರಾಜಧಾನಿಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದರು. ಇದೇ ವೇಳೆ ರಾಜ್ಯದ ಆಡಳಿತಾರೂಢ ಎಲ್ ಡಿಎಫ್ ಹಾಗೂ ವಿರೋಧ ಪಕ್ಷ ಯುಡಿಎಫ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇರಳದ ಸರ್ವತೋಮುಖ ಅಭಿವೃದ್ಧಿಗೆ ಎನ್ ಡಿಎ ಸರ್ಕಾರ ಅನಿವಾರ್ಯ ಎಂದು ಪ್ರತಿಪಾದಿಸಿದರು.

ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿದ ನಂತರ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ, ಮೇಯರ್ ವಿ.ವಿ. ರಾಜೇಶ್ ಅವರನ್ನು ಪ್ರಶಂಸಿಸಿದರು. 101 ಸದಸ್ಯ ಬಲದ ಪಾಲಿಕೆಯಲ್ಲಿ 50 ಸ್ಥಾನಗಳನ್ನು ಗೆದ್ದ ಬಿಜೆಪಿ, ಮೊದಲ ಬಾರಿಗೆ ಕೇರಳದ ಪ್ರಮುಖ ನಗರದ ಆಡಳಿತ ಚುಕ್ಕಾಣಿ ಹಿಡಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರು.

ಅಭಿವೃದ್ಧಿ ಯೋಜನೆಗಳಿಗೆ ಚಾಲನೆ: ಪುತರಿಕ್ಕಂಡಂ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು 4 ಹೊಸ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಇದರಲ್ಲಿ 3 ‘ಅಮೃತ ಭಾರತ್ ಎಕ್ಸ್‌ಪ್ರೆಸ್‌’ ರೈಲುಗಳು (ನಾಗರ್‌ಕೋಯಿಲ್-ಮಂಗಳೂರು, ತಿರುವನಂತಪುರಂ-ತಾಂಬರಂ ಮತ್ತು ತಿರುವನಂತಪುರಂ-ಚರ್ಲಪಲ್ಲಿ) ಸೇರಿವೆ. ಜೊತೆಗೆ 1 ಲಕ್ಷ ಫಲಾನುಭವಿಗಳಿಗೆ ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ಸೌಲಭ್ಯ ಒದಗಿಸಿದರು.

ರಾಜಕೀಯ ಸಂಚಲನ: ಕೇರಳದ ಪ್ರಬಲ ಪ್ರಾದೇಶಿಕ ಪಕ್ಷವಾದ ಟ್ವೆಂಟಿ20 (Twenty20), ಸಾಬು ಎಂ. ಜಾಕೋಬ್ ನೇತೃತ್ವದಲ್ಲಿ ಅಧಿಕೃತವಾಗಿ ಎನ್ ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಯಿತು. ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸಿದ ಮೋದಿ, ಶಬರಿಮಲೆ ಚಿನ್ನದ ನಾಪತ್ತೆ ಪ್ರಕರಣದ ಬಗ್ಗೆ ಎನ್ ಡಿಎ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಲಿದೆ ಎಂದು ಎಚ್ಚರಿಸಿದರು. ಎಡಪಕ್ಷಗಳು ಮತ್ತು ಕಾಂಗ್ರೆಸ್ ಮೈತ್ರಿಕೂಟವು ರಾಜ್ಯವನ್ನು ಲೂಟಿ ಮಾಡುತ್ತಿವೆ ಎಂದು ಕಿಡಿಕಾರಿದ ಅವರು, ವಿಕಸಿತ ಕೇರಳಕ್ಕಾಗಿ ಈಗ ಬದಲಾವಣೆ ಅಗತ್ಯ ಎಂದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.