ಕಬ್ಬಿನ ದರ ಗೊಂದಲ: ಸರ್ಕಾರಿ ಆದೇಶಕ್ಕೆ ಬೆಲೆ ನೀಡದ ಕಲಬುರಗಿ ಕಾರ್ಖಾನೆಗಳು; ವಿಧಾನಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಆಕ್ರೋಶ

Date:

spot_img

ಕಲಬುರಗಿ: ಕಬ್ಬಿನ ಇಳುವರಿಯನ್ನು ಪರಿಗಣಿಸದೆ, ಪ್ರತಿ ಟನ್ ಕಬ್ಬಿಗೆ 3,300/- ರೂ. ದರವನ್ನು ನಿಗದಿಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ ನಿರ್ದೇಶನವನ್ನು ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪಾಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ, ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಕ್ಷಣ ಆದೇಶ ಜಾರಿಗೊಳಿಸಲು ಆಗ್ರಹಿಸಿದ್ದಾರೆ.

ಇತ್ತೀಚೆಗೆ ರೈತರು ನಡೆಸಿದ ತೀವ್ರ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ, ಪ್ರತಿ ಟನ್‌ಗೆ ಕಾರ್ಖಾನೆಗಳಿಂದ 3,250/- ರೂ. ಹಾಗೂ ಸರ್ಕಾರದ ವತಿಯಿಂದ 50/- ರೂ. ಸೇರಿ ಒಟ್ಟು 3,300/- ರೂ. ನೀಡಲು ತೀರ್ಮಾನಿಸಲಾಗಿತ್ತು. ಇದು ರಾಜ್ಯದ ಎಲ್ಲಾ ಕಾರ್ಖಾನೆಗಳಿಗೂ ಅನ್ವಯವಾಗುವಂತೆ ನೀಡಿದ ಸ್ಪಷ್ಟ ನಿರ್ದೇಶನವಾಗಿತ್ತು.

ಆದರೆ, ಈ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿ ಕಲಬುರಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ವಿಭಿನ್ನ ನಿರ್ಧಾರ ಕೈಗೊಂಡಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ. ಸಭೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯನ್ನು ಕಡೆಗಣಿಸಿ, ಪ್ರತಿ ಟನ್‌ಗೆ ಕಾರ್ಖಾನೆಯಿಂದ 2,950/- ರೂ. ಮತ್ತು ಸರ್ಕಾರದಿಂದ 50/- ರೂ. ಸೇರಿಸಿ ಕೇವಲ 3,000/- ರೂ. ಮಾತ್ರ ನೀಡಲು ನಿರ್ಣಯಿಸಲಾಗಿದೆ.

ಸರಕಾರವೇ ನಿಗದಿಪಡಿಸಿದ ದರಕ್ಕಿಂತ 300/- ರೂ. ಕಡಿಮೆ ನೀಡುವ ಈ ತೀರ್ಮಾನವು ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ತೀವ್ರ ಗೊಂದಲ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಈ ವಿದ್ಯಮಾನವು ರೈತರನ್ನು ಮತ್ತೊಮ್ಮೆ ಬೀದಿಗಿಳಿದು ಹೋರಾಟ ಮಾಡಲು ಪ್ರೇರೇಪಿಸುವ ಸಾಧ್ಯತೆಗಳಿವೆ ಎಂದು ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಕಾರ್ಖಾನೆಗಳ ಈ ಉಲ್ಲಂಘನೆಯು ಮುಖ್ಯಮಂತ್ರಿಗಳ ನಿರ್ದೇಶನಕ್ಕೆ ಬೆಲೆ ಕೊಡದಂತಾಗಿದೆ. ಆದ್ದರಿಂದ, ರಾಜ್ಯ ಸರ್ಕಾರವು ಕಬ್ಬಿನ ದರ ಕುರಿತ ತನ್ನ ಹಿಂದಿನ ಆದೇಶವನ್ನು ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ತಕ್ಷಣವೇ ಸೂಕ್ತ ಕಾನೂನಾತ್ಮಕ ಆದೇಶವನ್ನು ಹೊರಡಿಸಬೇಕು ಎಂದು ಶಶೀಲ್ ಜಿ. ನಮೋಶಿ ಅವರು ಮುಖ್ಯಮಂತ್ರಿಗಳನ್ನು ಕೋರಿದ್ದಾರೆ. ಇಲ್ಲವಾದಲ್ಲಿ, ಹೋರಾಟವು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.