spot_img

‘ಕಾಂತಾರ: ಚಾಪ್ಟರ್ 1’ ಬಿಡುಗಡೆ ದಿನಾಂಕ ಫಿಕ್ಸ್: ಅ. 2ಕ್ಕೆ ರಿಷಬ್ ಶೆಟ್ಟಿ ಘರ್ಜನೆ!

Date:

spot_img

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಹೊಂಬಾಳೆ ಫಿಲಂಸ್ ಮಾಹಿತಿ ಹಂಚಿಕೊಂಡಿದ್ದು, ಚಿತ್ರವು ಅಕ್ಟೋಬರ್ 2ರಂದು ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ 7 ಭಾಷೆಗಳಲ್ಲಿ ತೆರೆ ಕಾಣಲಿದೆ.

ಇಂದು (ಜುಲೈ 7) ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಶುಭ ಸಂದರ್ಭದಲ್ಲೇ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ಸಿಕ್ಕಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ‘ದಂತಕಥೆಯ ಮುನ್ನುಡಿ… ಆ ನುಡಿಗೊಂದು ಪರಿಚಯ… ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ’ ಎಂಬ ಸಾಲುಗಳೊಂದಿಗೆ ವಿಶೇಷ ಮಾಹಿತಿಯನ್ನು ನೀಡಿದೆ. ಇದು ‘ಡಿವೈನ್ ಸ್ಟಾರ್’ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ.

ಅದ್ಭುತ ಪೋಸ್ಟರ್‌ನಲ್ಲಿ ರಿಷಬ್ ರಕ್ತಸಿಕ್ತ ಅವತಾರ ಬಿಡುಗಡೆಯಾಗಿರುವ ಅದ್ಧೂರಿ ಪೋಸ್ಟರ್‌ನಲ್ಲಿ ರಿಷಬ್ ಶೆಟ್ಟಿ ಕೈಯಲ್ಲಿ ಕೊಡಲಿ ಮತ್ತು ಗುರಾಣಿ ಹಿಡಿದಿದ್ದು, ಗುರಾಣಿಗೆ ಬಾಣಗಳು ಚುಚ್ಚಿಕೊಂಡಿವೆ. ಹಿಂಭಾಗದಲ್ಲಿ ಬೆಂಕಿ ಜ್ವಾಲೆಗಳು ಕಾಣುತ್ತಿದ್ದು, ರಿಷಬ್ ಶೆಟ್ಟಿ ಮುಖದಲ್ಲಿ ಆಕ್ರೋಶದ ಭಾವ ಎದ್ದು ಕಾಣುತ್ತಿದೆ. ರಕ್ತಸಿಕ್ತ ಅವತಾರದಲ್ಲಿ ಘರ್ಜಿಸುತ್ತಿರುವ ರಿಷಬ್ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದಾರೆ.

ಬಿಡುಗಡೆ ದಿನಾಂಕದ ಹಿಂದಿನ ಲೆಕ್ಕಾಚಾರ ಅಕ್ಟೋಬರ್ 2 ಗಾಂಧಿ ಜಯಂತಿ ಗುರುವಾರ ಬರುವುದರಿಂದ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಉತ್ತಮ ಗಳಿಕೆ ಆಗುವ ನಿರೀಕ್ಷೆ ಇದೆ. ಅಲ್ಲದೆ, ಅಕ್ಟೋಬರ್ ಮಧ್ಯದಲ್ಲಿ ದೀಪಾವಳಿ ಹಬ್ಬವೂ ಬರಲಿದ್ದು, ಇದು ಚಿತ್ರದ ಯಶಸ್ಸಿಗೆ ಮತ್ತಷ್ಟು ಸಹಕಾರಿ ಆಗಲಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಅಕ್ಟೋಬರ್ 2ರಂದೇ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಕೆಲವು ದಿನಗಳ ಹಿಂದೆ, ‘ಕಾಂತಾರ: ಚಾಪ್ಟರ್ 1’ ಚಿತ್ರದ ಸೆಟ್‌ನಲ್ಲಿ ಅವಘಡಗಳು ಸಂಭವಿಸಿದ್ದು, ಚಿತ್ರದ ಬಿಡುಗಡೆ ವಿಳಂಬವಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ವದಂತಿಗಳನ್ನು ತಳ್ಳಿಹಾಕಿರುವ ಚಿತ್ರತಂಡ, ನಿಗದಿತ ದಿನಾಂಕದಂದೇ ಸಿನಿಮಾ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಾಳೆ ಕಾರ್ಕಳದಲ್ಲಿ ಅಲ್ಪ ಸಂಖ್ಯಾತರಿಗೆ ಮಾಹಿತಿ ಕಾರ್ಯಾಗಾರ!

ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ನಾಳೆ (ಮಂಗಳವಾರ, ಜುಲೈ 8, 2025) ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಬೇವಿನ ಎಲೆಯ ಅದ್ಭುತ ಗುಣಗಳು: ಮೂತ್ರಪಿಂಡದ ಕಲ್ಲುಗಳಿಂದ ಮೊಡವೆ ನಿವಾರಣೆವರೆಗೆ!

ಪ್ರೋಟೀನ್, ವಿಟಮಿನ್-ಸಿ, ಕ್ಯಾರೋಟಿನ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವ ಬೇವಿನ ಎಲೆಗಳು ಹಲವು ರೋಗಗಳಿಗೆ ರಾಮಬಾಣವಾಗಿವೆ.

ಮಣಿಪಾಲದಲ್ಲಿ ದುರಂತ: ಮೂರ್ಛೆ ರೋಗದಿಂದ ಬೇಸತ್ತು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಮೂರ್ಛೆ ರೋಗದಿಂದ ಬಳಲುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 80 ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ನಡೆದಿದೆ.

ಜಲಪಾತದ ತುದಿಯಲ್ಲಿ ಪ್ರಪೋಸ್ ಮಾಡಲು ಹೋಗಿ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದ ಯುವಕ : ವಿಡಿಯೋ ವೈರಲ್!

ತನ್ನ ಕನಸಿನ ಗೆಳತಿಗೆ ಜಲಪಾತದ ತುದಿಯಲ್ಲಿ ನಿಂತು ಪ್ರಪೋಸ್ ಮಾಡಲು ಪ್ರಯತ್ನಿಸುತ್ತಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.