
ಕಾರ್ಕಳ : ಜೆಸಿಐ ಕಾರ್ಕಳ ರೂರಲ್ ವಲಯ ನಿರ್ದೇಶಿತ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್”ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ 83 ಬಾರಿ ರಕ್ತ ದಾನ ಮಾಡಿ 70 ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ಸಾಮಾಜಿಕ ಹಿತಚಿಂತಕ, ದಾನಿ, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್ ಅವರನ್ನು ದಿನಾಂಕ 30/06/25ರಂದು ಸಮೃದ್ಧಿ ಎಂಟರ್ಪ್ರೈಸ್ ಕಾರ್ಕಳ ಇಲ್ಲಿ ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೇಸಿ ಅರುಣ್ ಪೂಜಾರಿ ಮಾಂಜ,ವಲಯ ನಿರ್ದೇಶಕರಾದ ಜೇಸಿ ಮಂಜುನಾಥ್ ಕೋಟ್ಯಾನ್,ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಸಂತೋಷ್ ಬಂಗೇರ, ಸ್ಥಾಪಕರಾದ ಜೇಸಿ ಸತೀಶ್ ಪೂಜಾರಿ, ಮಾರ್ಗದರ್ಶಕರಾದ ಪ್ರಕಾಶ್ ಕಾರ್ಕಳ,ಪೂರ್ವಾಧ್ಯಕ್ಷರಾದ ಜೇಸಿ ಮೋಹನ್ ನಕ್ರೆ, ಜೇಸಿ ವೀಣಾ ರಾಜೇಶ್, ಜೇಸಿ ಶೋಭಾ ಭಾಸ್ಕರ್,ಜೂನಿಯರ್ ಜೇಸಿ ದಿಯಾ ಭಂಡಾರಿ ಸದಸ್ಯರಾದ ಜೇಸಿ ತಾರಾನಾಥ್ ಕೋಟ್ಯಾನ್, ಜೇಸಿ ಅಜಯ್ , ಜೇಸಿ ಸುಧೀರ್ ಪೂಜಾರಿ, ಜೇಸಿ ಶಾಲಿನಿ ಸುವರ್ಣ,ಜೇಸಿ ವರ್ಷಿತ್ , ರಿಯಾ ಹಾಜರಿದ್ದರು.