
ಮಾರ್ಚ್.24 : ಇವತ್ತು ಸೋಮವಾರ ಬೆಳಿಗ್ಗೆ ಉಡುಪಿ ಪೇಜಾವರ ಮಠದಲ್ಲಿರುವ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಾದುಕಾ ಸನ್ನಿಧಾನದಲ್ಲಿ ಭಕ್ತಿ ಸಿದ್ಧಾಂತೋತ್ಸವ – ರಾಮೋತ್ಸವ ಪೆರಣಂಕಿಲ -2025 ಇದರ ಆಮಂತ್ರಣ ಪತ್ರಿಕೆಯನ್ನು ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರೂ ಮುಂಬಯಿಯ ಪ್ರಸಿದ್ಧ ಜೋತಿಷ್ಯರೂ ಆಗಿರುವ ವಿದ್ವಾನ್ ಪೆರಣಂಕಿಲ ಹರಿದಾಸ ಭಟ್ಟರು ಮತ್ತು ಮಠದ ದಿವಾನರಾದ ಎಂ.ರಘುರಾಮಾಚಾರ್ಯರು ಬಿಡುಗಡೆಗೊಳಿಸಿದರು. ಮಠದ ಸಿ ಇ ಒ. ಎಸ್.ಸುಬ್ರಹ್ಮಣ್ಯ ಭಟ್ಟರು, ಸಮಿತಿಯ ಪ್ರಮುಖರಾದ ವಿಷ್ಣುಮೂರ್ತಿ ಆಚಾರ್ಯ ಸಗ್ರಿ ಅನಂತ ಸಾಮಗ ಪೆರಣಂಕಿಲ ಶ್ರೀಶ ನಾಯಕ್ , ಕೃಷ್ಣರಾಜ ಕುತ್ಪಾಡಿ , ರಾಮಚಂದ್ರ ಉಪಾಧ್ಯಾಯ , ವಾಸುದೇವ ಭಟ್ ಪೆರಂಪಳ್ಳಿ, ಮಹೇಶ ಕುಲಕರ್ಣಿ ಮೊದಲಾದವರೂ ಜೊತೆಗೂಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು .