ವೈದ್ಯಕೀಯ ಆರೈಕೆಯಲ್ಲಿ ಮಾನವೀಯ ಸ್ಪರ್ಶ ಉತ್ತಮ ಫಲಿತಾಂಶ ನೀಡುತ್ತದೆ : ಡಾ ಪೀಟರ್ ಆಂಡ್ರೂ ಬ್ರೇನನ್

Date:

spot_img

ಕಲಬುರ್ಗಿ: ವೈದ್ಯಕೀಯ ಆರೈಕೆಯಲ್ಲಿ ಮಾನವೀಯತೆಯ ಸ್ಪರ್ಶವು ರೋಗಿಯ ಸ್ವಾತಂತ್ರ್ಯವನ್ನು ಗೌರವಿಸಿ, ನಂಬಿಕೆ ಮತ್ತು ಸಹಾನುಭೂತಿಯ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಉತ್ತಮ ವೈದ್ಯಕೀಯ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಇಂಗ್ಲೆಂಡ್ ನ ಪ್ರಖ್ಯಾತ ವೈದ್ಯ ಡಾ ಪೀಟರ್ ಆಂಡ್ರೂ ಬ್ರೇನನ್ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್ ನಿಜಲಿಂಗಪ್ಪ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಮಾನವೀಯತೆ ಹಾಗೂ ರೋಗಿಯ ಆರೈಕೆ ಎಂಬ ವಿಷಯದ ಕುರಿತಾದ ಆತಿಥ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ದಂತ ಮಹಾವಿದ್ಯಾಲಯ, ಸೋಸೈಟಿ ಆಫ್ ಕ್ಲೀನಿಕಲ್ ರಿಸರ್ಚ್ ಐಂಡ್ ಮೆಡಿಕಲ್ ಪ್ರೋಪೆಷನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು‌.

ವೈದ್ಯಕೀಯ ಸಂವಹನವು ನಂಬಿಕೆಯಿಂದ ಕೂಡಿದ್ದು, ರೋಗಿಯ ಅಗತ್ಯಗಳಿಗೆ ಪ್ರಾಮುಖ್ಯತೆ ನೀಡುವಂತಿರಬೇಕು. ಇದು ರೋಗಿಯು ತಮ್ಮ ದೀರ್ಘಾವಧಿಯ ಆಸಕ್ತಿಗಳಿಗೆ ಅನುಗುಣವಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಈ ವೈದ್ಯರು ಸುಮಾರು 350 ಹೆಚ್ಚು ಲೇಖನಗಳನ್ನು ಹಾಗೂ ಮಾನವ ದೇಹ ರಚನಾ ಶಾಸ್ತ್ರದ ಮೇಲೆ ಹಲವಾರು ಕೃತಿಗಳನ್ನು ಬರೆದಿದ್ದಾರೆ.

ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಮೌಖಿಕ ಮತ್ತು ಮ್ಯಾಕ್ಸಿಲೊಫೇಶಿಯಲ್ ಶಸ್ತ್ರಚಿಕಿತ್ಸೆಯಲ್ಲಿ ಜಾಗತಿಕವಾಗಿ ಪ್ರಸಿದ್ಧರಾಗಿರುವ ಇಂಗ್ಲೇಂಡ್ ನ ಬ್ರಿಸ್ಟಲ್ ವೈದ್ಯಕೀಯ ವಿಶ್ವವಿದ್ಯಾಲಯದ ಎಲಿಜಬೆತ್ ಬ್ರೇನನ್, ಎಮಿಲಿ ಮೋರಿಯಾ ಸಿಂಪ್ಸನ್, ಮಿಸ್ ಕಾನ್ಸೇಟ್ನ್ಸ ಅಲೈನ್ಸ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಸಂಯೋಜಕರಾದ ಡಾ ಅನೀಲಕುಮಾರ ಪಟ್ಟಣ, ಕಾಲೇಜಿನ ಪ್ರಾಚಾರ್ಯರಾದ ಡಾ ಜಯಶ್ರೀ ಮುದ್ದಾ, ಉಪ ಪ್ರಾಚಾರ್ಯರಾದ ಡಾ ವೀರೇಂದ್ರ ಪಾಟೀಲ್, ಡಾ ಸುರಭಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕಲಬುರ್ಗಿಯ ವಿವಿಧ ದಂತ ಮಹಾವಿದ್ಯಾಲಯಗಳ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ರಕ್ತದಾನಿಗಳ ದಿನ

ವಿಶ್ವ ರಕ್ತದಾನಿಗಳ ದಿನದ ಮಹತ್ವ ಮತ್ತು ಜೂನ್ 14 ರಂದೇ ಇದನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ರಕ್ತದಾನ ಮಾಡಿ ಜೀವ ಉಳಿಸಿ!

ಮಹಿಳೆಯರೇ ಎಚ್ಚರ..! ರಾತ್ರಿ 11 ದಾಟಿದ್ರೂ ನಿದ್ರೆ ಮಾಡಲ್ವಾ? ನಿಮಗಾಗಿ ಕಾಯ್ತಿದೆ ಈ ದೊಡ್ಡ ಕಾಯಿಲೆ

ಮಹಿಳೆಯರು ರಾತ್ರಿ 11 ಗಂಟೆಯೊಳಗೆ ಮಲಗುವುದು ಏಕೆ ಮುಖ್ಯ? ತಡವಾಗಿ ನಿದ್ರಿಸುವುದರಿಂದ ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಹೇಗೆ ಕಾಡುತ್ತದೆ ಎಂದು ತಿಳಿಯಿರಿ.

ಹೈದರಾಬಾದ್ ಮೀನು ಪ್ರಸಾದಕ್ಕೆ ಹರಿದುಬಂದ ಜನಸಾಗರ

ಹೈದರಾಬಾದ್‌ನಲ್ಲಿ ಅಸ್ತಮಾ ನಿವಾರಣೆಯ ಸಾಂಪ್ರದಾಯಿಕ ಮೀನು ಪ್ರಸಾದ ವಿತರಣೆಗೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟ ಗಗನ್ ಚಿನ್ನಪ್ಪ ಲವ್ ಸ್ಟೋರಿ ಬ್ರೇಕಪ್ ಸೀಕ್ರೆಟ್ಸ್

ನಟ ಗಗನ್ ಚಿನ್ನಪ್ಪ ತಮ್ಮ ಮೊದಲ ಪ್ರೀತಿಯಲ್ಲಿ ಎದುರಿಸಿದ ವಂಚನೆ ಹಾಗೂ ಆರ್ಥಿಕ ನಷ್ಟದ ಕಹಿಸತ್ಯ ಬಿಚ್ಚಿಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ