
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತಕ್ಕೆ ಗಂಭೀರವಾಗಿ ಸವಾಲು ಹಾಕಿದ್ದಾರೆ. ಆರ್ಥಿಕತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪಾಕಿಸ್ತಾನ ಭಾರತವನ್ನು ಮೀರಿಸದಿದ್ದರೆ, ತಮ್ಮ ಹೆಸರನ್ನೇ ಬದಲಾಯಿಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.
ಅವರು, “ನಾವು ಹಗಲಿರುಳು ದುಡಿಯುತ್ತೇವೆ. ಪಾಕಿಸ್ತಾನವನ್ನು ಶ್ರೇಷ್ಠ ರಾಷ್ಟ್ರವಾಗಿ ರೂಪಿಸೋಣ. ಭಾರತವನ್ನು ಸೋಲಿಸಲು ಶಕ್ತಿ ಮತ್ತು ಇಚ್ಛಾಶಕ್ತಿ ನನ್ನಲ್ಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಮಗೆ ತಮ್ಮ ಹಿರಿಯ ಸಹೋದರ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಮಾರ್ಗದರ್ಶನವಿದೆ ಎಂದು ಹೇಳಿದ ಅವರು, “ನಾನು ನವಾಜ್ ಷರೀಫ್ ಅವರ ಅನುಯಾಯಿ. ಅವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಲು ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸ್ಪಷ್ಟಪಡಿಸಿದ ಶೆಹಬಾಜ್ ಷರೀಫ್, “ಸರ್ವಶಕ್ತನ ಆಶೀರ್ವಾದ ನಮ್ಮ ಮೇಲೆ ಇದೆ. ನಾವು ಭಾರತವನ್ನು ಅಭಿವೃದ್ಧಿಯಲ್ಲೂ, ಪ್ರಗತಿಯಲ್ಲೂ ಸೋಲಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.