ಶಂಕರನಾರಾಯಣದಲ್ಲಿ ಹೆಂಡತಿಯನ್ನು ಕತ್ತಿಯಿಂದ ಕಡಿದು ಕೊಂದ ಗಂಡ !

Date:

spot_img

ಉಡುಪಿ : ಉಡುಪಿ ಜಿಲ್ಲೆಯ ಶಂಕರನಾರಾಯಣ ಬಳಿಯ ಹಿಲಿಯಾಣ ಗ್ರಾಮದ ಹೊಸಮಠದಲ್ಲಿ ಜೂನ್ 19ರ ರಾತ್ರಿ ನಡೆದ ಭೀಕರ ಘಟನೆಯಲ್ಲಿ ಗಂಡನೇ ತನ್ನ ಪತ್ನಿಯನ್ನು ಮನೆಯೊಳಗೆ ಕತ್ತಿಯಿಂದ ಕಡಿದು ಕೊಂದಿರುವ ಅಮಾನುಷ ಪ್ರಕರಣ ಬೆಳಕಿಗೆ ಬಂದಿದೆ.

27 ವರ್ಷದ ರೇಖಾ ಎಂಬ ಮಹಿಳೆಯು ಹತ್ಯೆಗೊಳಗಾಗಿದ್ದು, ಆರೋಪಿ ಗಂಡ ಗಣೇಶ ಪೂಜಾರಿ ಮದ್ಯಪಾನ ಚಟವನ್ನು ಹೊಂದಿದ್ದು , ಈ ಹಿಂದೆ ಕೂಡ ಪತ್ನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಾಹಿತಿಗಳು ಲಭ್ಯವಾಗಿವೆ.

ಹತ್ಯೆಯ ದಿನ ರಾತ್ರಿ 11:30ರ ವೇಳೆಗೆ, ರೇಖಾ ಕೆಲಸ ಮುಗಿಸಿ ಮನೆಗೆ ಬಂದ ನಂತರ ಮನೆಯೊಳಗೆ ಹೋದ ಗಣೇಶ್, ಬಾಗಿಲು ಲಾಕ್ ಮಾಡಿ ರೇಖಾ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದನ್ನು ಕುಟುಂಬಸ್ಥರು ಕಿಟಕಿಯಿಂದ ನೋಡಿ ಸಾಕಷ್ಟು ಕೇಳಿಕೊಂಡರೂ ಆರೋಪಿ ಕೇಳದೆ ರೇಖಾರನ್ನು ಮಾರಕವಾಗಿ ಇರಿದು ಕೊಂದಿದ್ದಾನೆ. ನಂತರ ಹೊರಗೆ ಬಂದು “ಪೊಲೀಸರಿಗೆ ಹೇಳಿದರೆ ನಿಮ್ಮನ್ನೂ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ BNS ಕಲಂ 103 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ತನಿಖೆ ಆರಂಭವಾಗಿದೆ.

ಸ್ಥಳೀಯರು ಈ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದು, ತಾಯಿ ರೇಖಾರ ಮರಣದಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.