
ಕಾರ್ಕಳ : ಶ್ರೀ ಕ್ಷೇತ್ರ ಪರ್ಪಲೆ ಗಿರಿಯ ಕಲ್ಕುಡ ದೇವಸ್ಥಾನದ ಪ್ರತಿಷ್ಠಾಪನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 200000/- ದ ಡಿಡಿ ಯನ್ನು ಕಾರ್ಕಳ ತಾಲೂಕಿನ ಯೋಜನಾಧಿಕಾರಿಯವರಾದ ಬಾಲಕೃಷ್ಣ ಹಿರಿಂಜರವರು ಕಲ್ಕುಡ ದೈವಸ್ಥಾನದ ಆಡಳಿತ ಮಂಡಳಿ ಸಮಿತಿಯವರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಕಲ್ಕುಡ ದೇವಸ್ಥಾನದ ಪುನರುತ್ಥಾನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ದೈವಸ್ಥಾನ ಅಧ್ಯಕ್ಷರಾದ ಸುಭಾಷ್ ಚಂದ್ರ ಹೆಗ್ಡೆ, ಕಾರ್ಯದರ್ಶಿಗಳಾದ ಸತ್ಯೇಂದ್ರ ಭಟ್, ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಸಮಿತಿ ಅಧ್ಯಕ್ಷರಾದ ಮಂಜುನಾಥ್ ಬೈಲೂರು, ಕಾರ್ಕಳ ನಗರ ವಲಯದ ವಲಯ ಅಧ್ಯಕ್ಷರಾದ ಸದಾನಂದ ಆಚಾರ್ಯ, ವಲಯ ಮೇಲ್ವಿಚಾರಕರಾದ ಶ್ರೀಮತಿ ಗೀತಾ, ಕೃಷಿ ಅಧಿಕಾರಿಯಾದ ಬ್ರಿಜೇಶ್, ಸೇವಾ ಪ್ರತಿನಿಧಿಗಳಾದ ಶೀತಲ್, ಶುಭ ಉಪಸ್ಥಿತರಿದ್ದರು.