ಹಿರಿಯಡಕದ ಹೆಮ್ಮೆ, ದಕ್ಷ ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಅವರಿಗೆ ನಾಗರಿಕ ಸನ್ಮಾನ

Date:

spot_img

ಹಿರಿಯಡಕ: ಹಿರಿಯಡಕದ ಮಣ್ಣಿನ ಮಗ, ಸರಳ ಸಜ್ಜನಿಕೆಯ ದಕ್ಷ ಐ.ಎ.ಎಸ್. ಅಧಿಕಾರಿ ಹಾಗೂ ಪ್ರಸ್ತುತ ಚಂಡೀಗಢ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಹಿರಿಯಡಕ ರಾಜೇಶ್ ಪ್ರಸಾದ್ ಅವರಿಗೆ ಹಿರಿಯಡಕದ ಸಮಸ್ತ ನಾಗರಿಕರ ವತಿಯಿಂದ ಇದೇ ಭಾನುವಾರ ಭವ್ಯ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಭವ್ಯ ಮೆರವಣಿಗೆಯೊಂದಿಗೆ ಸ್ವಾಗತ:

ಡಿಸೆಂಬರ್ 21ರ ಸಂಜೆ 4:00 ಗಂಟೆಗೆ ಹಿರಿಯಡಕದ ಶ್ರೀ ದೇವಾಡಿಗ ಸಭಾಭವನದಿಂದ ವಿವಿಧ ವಾದ್ಯಗೋಷ್ಠಿ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ರಾಜೇಶ್ ಪ್ರಸಾದ್ ದಂಪತಿಗಳನ್ನು ವಿಶೇಷ ಮೆರವಣಿಗೆಯ ಮೂಲಕ ಸಭಾವೇದಿಕೆಗೆ ಬರಮಾಡಿಕೊಳ್ಳಲಾಗುವುದು.

ಸನ್ಮಾನ ಸಮಾರಂಭ:

ಸಂಜೆ 5:00 ಗಂಟೆಗೆ ಹಿರಿಯಡಕದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮುಂಬೈನ ಚಾರ್ಟಡ್ ಅಕೌಂಟೆಂಟ್ ಶ್ರೀ ಎನ್. ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಲೋಕಾಯುಕ್ತರಾದ ಜಸ್ಟಿಸ್ ಪಿ. ವಿಶ್ವನಾಥ ಶೆಟ್ಟಿ ಅವರು ರಾಜೇಶ್ ಪ್ರಸಾದ್ ಅವರನ್ನು ಸನ್ಮಾನಿಸಲಿದ್ದಾರೆ. ಮಂಗಳೂರಿನ ಬ್ಯಾಂಕಿಂಗ್ ಮತ್ತು ವಿಮಾ ಸಲಹೆಗಾರರಾದ ಶ್ರೀ ನಿತ್ಯಾನಂದ ಶೆಟ್ಟಿಗಾರ್ ಅವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ: ಮುಖ್ಯ ಅತಿಥಿಗಳಾಗಿ ಮಾಹೆ ಮಣಿಪಾಲದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್ ಕೆ., ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ ಶೆಟ್ಟಿ, ಹಾಗೂ ಮಾಜಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ಪಾಲ್ಗೊಳ್ಳಲಿದ್ದಾರೆ. ರಾಜೇಶ್ ಪ್ರಸಾದ್ ಅವರ ಗುರುಗಳಾದ ಶ್ರೀ ಮಂಜುನಾಥ ಶೇರಿಗಾರ್ ನಿವೃತ್ತ ಪ್ರಾಂಶುಪಾಲರು ಪೆರ್ಡೂರು , ಶ್ರೀಮತಿ ಕೃಷ್ಣಬಾಯಿ ಟೀಚರ್ ಹಿರಿಯಡಕ , ಶ್ರೀ ರವಿರಾಜ ಶೆಟ್ಟಿ ಕುದಿಗ್ರಾಮ ಕೊಂಡಾಡಿ , ಶ್ರೀ ಮಂಜುನಾಥ ನಾಯಕ್ ಪೆಲತ್ತೂರು ಉಪಸ್ಥಿತರಿರಲಿದ್ದಾರೆ.

ಸಾಂಸ್ಕೃತಿಕ ವೈಭವ – ‘ಶನಿ ಮಹಾತ್ಮೆ’ ಪೌರಾಣಿಕ ತುಳು ನಾಟಕ:

ಸಂಜೆ 6:00 ಗಂಟೆಯಿಂದ ಮಂಗಳೂರಿನ ಖ್ಯಾತ ಶ್ರೀ ಲಲಿತೆ ಕಲಾವಿದರು (ರಿ.) ತಂಡದವರಿಂದ ಪೌರಾಣಿಕ ತುಳು ನಾಟಕ ‘ಶನಿ ಮಹಾತ್ಮೆ’ ಪ್ರದರ್ಶನಗೊಳ್ಳಲಿದೆ. ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯ ದೀಪಕಮಾಲಾ ಹಾಡಿನೊಂದಿಗೆ ನಡೆಯಲಿರುವ ಈ ನಾಟಕಕ್ಕೆ ಕದ್ರಿ ನವನೀತ ಶೆಟ್ಟಿ ಸಾಹಿತ್ಯ ಹಾಗೂ ಜೀವನ್ ಉಳ್ಳಾಲ್ ಅವರ ನಿರ್ದೇಶನವಿದೆ. ಕಿಶೋರ್ ಡಿ. ಶೆಟ್ಟಿ ಅವರ ನಿರ್ಮಾಣದ ಈ ನಾಟಕ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ.

ಹಿರಿಯಡಕದ ಹೆಮ್ಮೆಯ ಪುತ್ರನಿಗೆ ಸಲ್ಲುವ ಈ ಗೌರವ ಕಾರ್ಯಕ್ರಮಕ್ಕೆ ಸಮಸ್ತ ನಾಗರಿಕರನ್ನು ಆತ್ಮೀಯವಾಗಿ ಸ್ವಾಗತಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ರಾಷ್ಟ್ರೀಯ ಪ್ರಸಾರ ದಿನ

ಭಾರತದಲ್ಲಿ ಜುಲೈ 23 ರಂದು ರಾಷ್ಟ್ರೀಯ ಪ್ರಸಾರ ದಿನ ಆಚರಿಸಲಾಗುತ್ತದೆ. ರೇಡಿಯೋ ಪ್ರಸಾರದ ಇತಿಹಾಸ, ಆಕಾಶವಾಣಿ ಮತ್ತು ಇದರ ಮಹತ್ವದ ಕುರಿತು ಇಲ್ಲಿದೆ ಮಾಹಿತಿ.

ಆರೋಗ್ಯಕ್ಕೆ ಡ್ರೈ ಫ್ರೂಟ್ಸ್ ಸೇವನೆ: ಯಾವ ಬೀಜಗಳನ್ನು ಯಾವ ಸಮಯದಲ್ಲಿ ತಿಂದರೆ ಡಬಲ್ ಲಾಭ?

ಬಾದಾಮಿ, ವಾಲ್ನಟ್, ಗೋಡಂಬಿ ಸೇವಿಸಲು ಸರಿಯಾದ ಸಮಯ ಹಾಗೂ ಅವುಗಳ ಪೂರ್ಣ ಪೋಷಕಾಂಶ ಪಡೆಯುವ ವಿಧಾನ ಇಲ್ಲಿದೆ.

ನೀರೆ ಬೈಲೂರು ಗಣೇಶೋತ್ಸವ: ದಿಲೀಪ್ ಶೆಟ್ಟಿ ಅಧ್ಯಕ್ಷರಾಗಿ ಪುನರಾಯ್ಕೆ

ಬೈಲೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಸಿಸಿಐ ಹೊಸ ನಿಯಮ: ನೋಬಾಲ್ ಎಸೆದರೆ ಬೌಲರ್ ಪಂದ್ಯದಿಂದ ಅಮಾನತು

2026-27ರ ದೇಶಿ ಕ್ರಿಕೆಟ್ ಋತುವಿಗೆ ಬಿಸಿಸಿಐ ಹೊಸ ನಿಯಮ ತಂದಿದೆ. ನಿಯಮ ಉಲ್ಲಂಘಿಸುವ ಬೌಲರ್‌ಗಳಿಗೆ ಕಠಿಣ ಶಿಕ್ಷೆ ಖಚಿತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.