
ಬೈಲೂರು : ಹೋಟೆಲ್ ಉದ್ಯಮಿಯಾಗಿದ್ದುಕೊಂಡು ಎಲ್ಲರ ಜೊತೆಗೆ ಉತ್ತಮ ಭಾಂದವ್ಯತೆಯನ್ನು ಇಟ್ಟುಕೊಂಡು ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರತೀ ಭಾರಿಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಉಚಿತವಾಗಿ ಸಭಾಂಗಣವನ್ನು ನೀಡಿ ಉತ್ತಮ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದುಕೊಂಡು ಎಲ್ಲರಿಗೂ ಮಾರ್ಗದರ್ಶಕರಾಗಿರುವ ಬೈಲೂರು ಮಾರಿಯಮ್ಮ ದೇವಸ್ಥಾನದ ಸಂಚಾಲಕರಾದ ಶ್ರೀಯುತ ಕೃಷ್ಣ ರಾಜ ಹೆಗ್ಡೆ (ತಮ್ಮಣ್ಣ) ನಿಧನರಾಗಿರುವುದು ನಮಗೆಲ್ಲರಿಗೂ ಅತೀವ ದುಃಖವನ್ನು ಉಂಟು ಮಾಡಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ನೀರೆ A ಒಕ್ಕೂಟದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಜಿ ಅಧ್ಯಕ್ಷರು /ಅಧ್ಯಕ್ಷರು/ ಪದಾಧಿಕಾರಿಗಳು ಸಂತಾಪವನ್ನು ಸೂಚಿಸಿರುತ್ತಾರೆ.