
ಬೈಲೂರು: ಬೈಲೂರಿನಲ್ಲಿ 12 ವರ್ಷಗಳ ನಂತರ ಅಕ್ಟೋಬರ್ 1 ಮತ್ತು ಅಕ್ಟೋಬರ್ 2 ರಂದು ಟೀಮ್ ಸಹಸ್ತ್ರ ಇದರ ವತಿಯಿಂದ ನಡೆಯಲಿರುವ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಇಂದು ಬೈಲೂರು ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಕ್ರೀಡಾ ಕೂಟ ನೆರವೇರಿತು. ಕ್ರೀಡಾ ಕೂಟವನ್ನು ಬೈಲೂರು ರಾಮ ಮಂದಿರದ ಟ್ರಸ್ಟಿ ಅಧ್ಯಕ್ಷರಾದ ಓಂಕಾರ್ ನಾಯಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಕನಿಷ್ಕ್ ಹೆಗ್ಡೆಯವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ನೀರೆ ಪಂಚಾಯತ್ ಸದಸ್ಯರಾದ ಯಶೋಧ ಆಚಾರ್ಯ, ಗ್ರಾಮ ಅಧ್ಯಕ್ಷರಾದ ಸಚಿನ್, ಕ್ರೀಡಾ ಕಾರ್ಯದರ್ಶಿ ಸುಮಿತ್ ಶೆಟ್ಟಿ, ದೈಹಿಕ ಶಿಕ್ಷಕರಾದ ಸತೀಶ್ ಮಾಸ್ಟರ್, ಎರ್ಲಪಾಡಿ ಉದ್ಯಮಿ ಪ್ರಸನ್ನ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಧರ್ಮರಾಜ್ ಕುಮಾರ್ ಎರ್ಲಪಾಡಿ, ಸ್ವಾಗತವನ್ನು ಸೌಮ್ಯ ಶೆಟ್ಟಿ ಬೈಲೂರು ನಡೆಸಿಕೊಟ್ಟರು




































