
ಬಲ್ಗೇರಿಯಾದ ಜನಪ್ರಿಯ ಭವಿಷ್ಯವಾಣಿ ಬಾಬಾ ವಂಗಾ ಅವರು ಮಾಡಿದ ಅನೇಕ ಭವಿಷ್ಯವಾಣಿಗಳು ಇತಿಹಾಸದಲ್ಲಿ ನಿಜವಾದ ಹಿನ್ನೆಲೆಯಲ್ಲಿ, ಅವರ ಮತ್ತೊಂದು ಭವಿಷ್ಯವಾಣಿ ಈಗ ಜಾಗತಿಕ ಚರ್ಚೆಗೆ ಕಾರಣವಾಗಿದೆ.
ಅವರ ಪ್ರಕಾರ, ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಭಾರೀ ಯುದ್ಧ ಸಂಭವಿಸಬಹುದು, ಮತ್ತು ಈ ಯುದ್ಧದಲ್ಲಿ ಒಂದು ಇಸ್ಲಾಮಿಕ್ ರಾಷ್ಟ್ರವು ಸಂಪೂರ್ಣವಾಗಿ ನಾಶವಾಗುವ ಸಾಧ್ಯತೆ ಇದೆ ಎಂದು ಅವರು ತಮ್ಮ ಸಾವಿನ ಮೊದಲು ಹೇಳಿದ್ದಾಗಿ ವರದಿಯಾಗಿದೆ.
ಬಾಬಾ ವಂಗಾ ಭವಿಷ್ಯವಾಣಿ ಮಾಡಿದ ಬಹುತೇಕ ಘಟನೆಗಳು—ಇಂದಿರಾ ಗಾಂಧಿ ಹತ್ಯೆ, ಅಮೆರಿಕದ 9/11 ದಾಳಿ, ಚೆರ್ನೊಬಿಲ್ ವಿಪತ್ತು ಮೊದಲಾದವು—ಇಲ್ಲಿಯವರೆಗೆ ನಿಜವಾಗಿರುವುದರಿಂದ, ಈ ಹೊಸ ಭವಿಷ್ಯವಾಣಿಯ ಪ್ರಸ್ತಾಪವು ಗಂಭೀರ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಉಗ್ರರ ದಾಳಿ ನಡೆದಿದೆ. ಇದನ್ನು ತಕ್ಷಣ ಬಾಬಾ ವಂಗಾ ಹೇಳಿದ್ದ ಭವಿಷ್ಯಕ್ಕೆ ಸಂಪರ್ಕಿಸಲು ಕೆಲವು ವೃತ್ತಪತ್ರಿಕೆಗಳು ಆರಂಭಿಸಿದ್ದು, ಪಾಕಿಸ್ತಾನದಲ್ಲಿಯೂ ಈ ಕುರಿತು ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದೆ.
ವಂಗಾ ಅವರ ಭವಿಷ್ಯವಾಣಿ ಪ್ರಕಾರ, “ಭಾರತದ ಮೇಲಿನ ದಾಳಿ ಆತಂಕದ ಹೊಸ ಯುಗಕ್ಕೆ ದಾರಿ ಮಾಡಿಕೊಡಬಹುದು. ಆದರೆ ಈ ದಾಳಿಯಿಂದ ಆರಂಭವಾದ ಸಂಘರ್ಷವೇ ಇಸ್ಲಾಮಿಕ್ ರಾಷ್ಟ್ರವೊಂದರ ಸಂಪೂರ್ಣ ನಾಶಕ್ಕೆ ಕಾರಣವಾಗಬಹುದು,” ಎಂಬ ಮಾತುಗಳು ಎಲ್ಲರ ಗಮನ ಸೆಳೆದಿವೆ.
ಹೀಗಾಗಿ, ವಿಶ್ವದಾದ್ಯಂತ ಈ ಭವಿಷ್ಯ ನಿಜವಾಗುತ್ತದೆಯೇ ಎಂಬ ಕುತೂಹಲ ಮೂಡಿದ್ದು, ಭದ್ರತೆಗಿಂತಲೂ ಭವಿಷ್ಯವಾಣಿಯ ತೂಕ ಹೆಚ್ಚು ಆಗಿದೆ ಎಂಬ ಮಾತು ಈಗ ಹರಿದಾಡುತ್ತಿದೆ.