
ಬೆಳ್ತಂಗಡಿ: ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ರಾಜ್ಯಸಭಾ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 100 ಶಾಲೆಗಳಿಗೆ ತಲಾ ₹1.46 ಲಕ್ಷ ರೂ. ನಂತೆ ಒಟ್ಟು ₹1.46 ಕೋಟಿ ರೂ. ಮಂಜೂರಾಗಿದೆ ಎಂದು ಅವರ ಆಪ್ತ ಕಾರ್ಯದರ್ಶಿ ಜನಾರ್ದನ್ ಕೆ. ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣವನ್ನು ಒದಗಿಸುವ ಗುರಿಯೊಂದಿಗೆ ಡಾ. ಹೆಗ್ಗಡೆಯವರು ಈ ಮಹತ್ವದ ನಿಧಿಯನ್ನು ಒದಗಿಸಿದ್ದಾರೆ.