
ದಿನ ವಿಶೇಷ – ಭಾರತದ ಮೊದಲ ಸಿನಿಮಾ
ಭಾರತ ಇತಿಹಾಸದಲ್ಲಿ 1912 ಮೇ 18ರಂದು ದಾದಾಸಾಹೇಬ್ ಟೂರ್ನಿಯವರಿಂದ ಮೊತ್ತ ಮೊದಲು ಈ ಪುಂಡಲೀಕ ಎನ್ನುವ ಚಲನಚಿತ್ರ ಮುಂಬೈಯಲ್ಲಿ ಪ್ರದರ್ಶನಗೊಂಡಿತು. ಇವತ್ತು ಒಂದು ಸಂದೇಶವನ್ನು ಚಲನಚಿತ್ರದ ಮೂಲಕವಾಗಿ ತಲುಪಿಸಿದರೆ ಇದರ ಸುಲಭದಲ್ಲಿ ಬೇರೆ ಯಾವ ಮಾಧ್ಯಮವು ಸಮಾಜಕ್ಕೆ ಇಷ್ಟು ಸುಲಭದಲ್ಲಿ ತಲುಪುವುದಿಲ್ಲ ಅಷ್ಟರಮಟ್ಟಿಗೆ ಚಲನಚಿತ್ರ ಸಾಮಾಜಿಕ ಜೀವನವನ್ನು ವ್ಯಾಪಿಸಿಕೊಂಡಿದೆ ಹಾಗೂ ಸಮಾಜವನ್ನು ಅಪ್ಪಿ ಕೊಂಡಿದೆ. ಲಂಡನ್ ನಲ್ಲಿ 1800ರ ಆಸುಪಾಸಿನಲ್ಲಿ ಚಲನಚಿತ್ರಗಳು ಪ್ರಾರಂಭವಾದವು.

ವಿದೇಶದಲ್ಲಿ ಶಿಕ್ಷಣವನ್ನು ಪಡೆದುಕೊಂಡು ಬಂದ ದಾದಾಸಾಹೇಬ್ ತೋರ್ನೆಯವರು ಶ್ರೀ ಪುಂಡಲೀಕ ಎನ್ನುವ 22 ನಿಮಿಷದ ಮೂಕಿ ಚಲನಚಿತ್ರವನ್ನು ಬಿಡುಗಡೆಗೊಳಿಸಿದರು. ಆದರೆ ಈ ಬಗ್ಗೆ ವಿವಾದವಿದೆ ಏಕೆಂದರೆ ಜಾನ್ಸನ್ ಎಂಬ ಕ್ಯಾಮರಾ ಮೆನ್ ಬ್ರಿಟಿಷ್ ವ್ಯಕ್ತಿ ಆದ್ದರಿಂದ ಇದನ್ನು ಭಾರತೀಯರು ಮಾಡಿದಲ್ಲ ಎನ್ನುವ ವಾದವಿದೆ ನಂತರದ ವರ್ಷದಲ್ಲಿ ದಾದಾಸಾಹೇಬ್ ಫಾಲ್ಕೆಯವರು ಸತ್ಯಹರಿಶ್ಚಂದ್ರ ಎನ್ನುವ ಸಿನಿಮಾವನ್ನು ತಾವಾಗಿಯೇ ತಯಾರು ಮಾಡಿದರು. ಈ ಸಿನಿಮಾ ಭಾರತದ ಮೊದಲ ಸಿನಿಮಾ ಎನ್ನುವ ಬಗ್ಗೆ ಹೆಚ್ಚಿನವರ ಅಭಿಪ್ರಾಯವಿದ್ದರೂ ಕೂಡ ಮೇ 18 1912ರಲ್ಲಿ ನಿರ್ಮಾಣಗೊಂಡ ಶ್ರೀ ಪುಂಡಲೀಕ ಎನ್ನುವ ಚಲನಚಿತ್ರ ಭಾರತದಲ್ಲಿ ನ ಮೊದಲ ಚಲನಚಿತ್ರ ಎಂದು ಕರೆದರೂ ಕೂಡ ತಪ್ಪಿಲ್ಲ ಎಂದು ಹಲವರ ವಾದವಿದೆ. ಮುಂಬೈಯ ಗ್ರಾಂಡ್ ರೋಡಿನಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ನಡೆದಿತ್ತು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ