ತೇಜಸ್ವಿ ಯಾದವ್ ಪತ್ನಿಯನ್ನು ‘ಜೆರ್ಸಿ ಹಸು’ ಎಂದ ಮಾಜಿ ಶಾಸಕ: ಬಿಹಾರದಲ್ಲಿ ರಾಜಕೀಯ ವಿವಾದ

Date:

spot_img

ಪಟನಾ: ಬಿಹಾರದಲ್ಲಿ ರಾಜಕೀಯ ವಾಕ್ಸಮರ ತಾರಕಕ್ಕೇರಿದ್ದು, ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಪತ್ನಿ ರಾಜಶ್ರೀ ಯಾದವ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದ್ದಾರೆ. ತೇಜಸ್ವಿ ಯಾದವ್ ಅವರು ತಮ್ಮ ಜಾತಿಯವರನ್ನು ಮದುವೆಯಾಗದೇ ಹೋದದ್ದಕ್ಕೆ ಟೀಕಿಸಿದ ರಾಜ್ ಬಲ್ಲಭ್, “ಅವರು ಹರಿಯಾಣ-ಪಂಜಾಬ್‌ನಿಂದ ಜೆರ್ಸಿ ಹಸುವನ್ನು ಕರೆತಂದಿದ್ದಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಈಗ ಬಿಹಾರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಆರ್‌ಜೆಡಿಯಿಂದ ತೀವ್ರ ಆಕ್ರೋಶ

ಮಾಜಿ ಶಾಸಕರ ಈ ಹೇಳಿಕೆಗೆ ಆರ್‌ಜೆಡಿ ನಾಯಕ ಕೌಶಲ್ ಯಾದವ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ತೇಜಸ್ವಿ ಅವರ ಪತ್ನಿಯ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಮೂಲಕ ರಾಜ್ ಬಲ್ಲಭ್ ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ಈ ಹೇಳಿಕೆ ಕೇವಲ ತೇಜಸ್ವಿ ಅವರ ಪತ್ನಿಗೆ ಮಾತ್ರವಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಈ ವ್ಯಕ್ತಿಯನ್ನು ಮತ್ತೆ ಜೈಲಿಗೆ ಕಳುಹಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ತೇಜಸ್ವಿ ಯಾದವ್ ಮತ್ತು ರಾಜ್‌ಶ್ರೀ ವಿವಾಹದ ಹಿನ್ನಲೆ

ತೇಜಸ್ವಿ ಯಾದವ್ ಅವರು ತಮ್ಮ ಬ್ಯಾಚ್‌ಮೇಟ್ ರಾಚೆಲ್ ಕೊಡಿನ್ಹೋ ಅವರನ್ನು 2021 ರಲ್ಲಿ ವಿವಾಹವಾಗಿದ್ದಾರೆ. ಮೂಲತಃ ಹರಿಯಾಣದವರಾದ ರಾಚೆಲ್ ಅವರು ವಿವಾಹದ ನಂತರ ತಮ್ಮ ಹೆಸರನ್ನು ರಾಜಶ್ರೀ ಯಾದವ್ ಎಂದು ಬದಲಾಯಿಸಿಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಶಾಸಕ ರಾಜ್ ಬಲ್ಲಭ್ ಯಾದವ್, ಹತ್ತು ವರ್ಷಗಳ ಹಿಂದೆ ಕುರ್ಮಿ ಸಮುದಾಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಸೇರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಜಯರಾಮ ಬನಾನ ಸಾಧನೆಗೆ ಕೋಟ ಪೂಜಾರಿ ಮೆಚ್ಚುಗೆ

ಉದ್ಯಮಿ ಜಯರಾಮ ಬನಾನ ಸಾಧನೆಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೊಂಡಾಡಿದ್ದು, ಮೋದಿ ಸರ್ಕಾರದ ಸಾಧನಾ ಪುಸ್ತಕ ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

ಕಾರ್ಕಳ ಎಸ್.ವಿ.ಟಿ. ಕಾಲೇಜಿನಲ್ಲಿ ರೋಟರಿ ಪ್ರಾಯೋಜಿತ ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ನೆರವೇರಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಧರ್ಮಸ್ಥಳ ಯೋಜನೆಯಿಂದ ಉಚಿತ ಹೊಲಿಗೆ ತರಬೇತಿ ಚಾಲನೆ

ಉಡುಪಿಯ ಬೊಮ್ಮರಬೆಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ತಿಂಗಳ ಉಚಿತ ಹೊಲಿಗೆ ತರಬೇತಿಗೆ ಚಾಲನೆ ಸಿಕ್ಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ: ಮಹಿಳೆಯರಿಗೆ ಸರ್ಕಾರಿ ಇಲಾಖೆಗಳ ಅಧ್ಯಯನ ಪ್ರವಾಸ

ಉಡುಪಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಜಾಗೃತಿ ಅಧ್ಯಯನ ಪ್ರವಾಸ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ