
ಭಾರತದಲ್ಲಿ ಮೊದಲು ರೈಲು ಓಡಿದ ದಿವಸ
ಭಾರತದ ಬಹು ಮುಖ್ಯ ಭಾಗವಾಗಿ ಗುರುತಿಸಿಕೊಂಡಿರುವುದು ರೈಲು ವ್ಯವಸ್ಥೆ.1853 ರ ಏಪ್ರಿಲ್ 16 ರಂದು, ಮೊದಲ ಪ್ರಯಾಣಿಕ ರೈಲು ಮುಂಬಯಿಯ ಬೋರಿ ಬಂದರ್ (ಇವತ್ತಿನ ಛತ್ರಪತಿ ಶಿವಾಜಿ ಟೆರ್ಮಿನಲ್ ಹತ್ತಿರವಾಗುತ್ತದೆ) ಮತ್ತು ಥಾಣೆ ನಡುವೆ 34 ಕಿ.ಮೀ ದೂರದಲ್ಲಿ ಓಡಿತು. ಇದು ಸಾಹಿಬ್, ಸುಲ್ತಾನ್ ಮತ್ತು ಸಿಂಧ್ ಎಂಬ ಮೂರು ಲೋಕೋಮೋಟಿವ್‌ಗಳಿಂದ ಕಾರ್ಯನಿರ್ವಹಿಸಲ್ಪಟ್ಟಿತು. ಮತ್ತು ಹದಿಮೂರು ಬೋಗಿಗಳನ್ನು ಹೊಂದಿತ್ತು. ಬೈಕಳ ಷಯಾನ್ ಹಾಗೂ ಬಾಂಡುಪ್ ಮಾರ್ಗವಾಗಿ ತಾಣ ತಲುಪಲು ಇದು ತೆಗೆದುಕೊಂಡ ಸಮಯ ಒಂದು ಗಂಟೆ.

ಸುಮಾರು 13 ವರ್ಷದ ನಂತರ ವಿರಾರ್ ಚರ್ಚ್ ಗೇಟ್ ನಡುವೆ ಪಶ್ಚಿಮ ರೈಲು ಪ್ರಾರಂಭವಾಯಿತು.ನಂತರ ಬೆಳೆಯುತ್ತಲೇ ಸಾಗಿದೆ.ಇವತ್ತು ಲೋಕಲ್ ರೈಲು ವ್ಯವಸ್ಥೆಯಲ್ಲಿ ಮುಂಬೈಯನ್ನು ಮೀರಿಸುವುದು ಅಸಾಧ್ಯ. ಈಗ ಇದರ ವ್ಯಾಪ್ತಿ ಕನಿಷ್ಠ 650 ಕಿಲೋಮೀಟರ್ ದಾಟಿದೆ. ಹಾಗೂ 2,342 ರೈಲುಗಳು ಸೇವೆ ನಿರ್ವಹಿಸುತ್ತಿದೆ. ಪ್ರತಿದಿನ ಕನಿಷ್ಠ ಪಕ್ಷ 62 ಲಕ್ಷದಷ್ಟು ಪ್ರಯಾಣಿಕರನ್ನು ಸಾಗಿಸುತ್ತದೆ. ಪ್ರತಿ ಎರಡು ನಿಮಿಷಕ್ಕೊಮ್ಮೆ ಇಲ್ಲಿ ರೈಲುಗಳು ಬಂದು ಸಾಗುತ್ತದೆ. ಈ ವಿಚಾರ ಮುಂಬೈಗೆ ಮಾತ್ರ ಹೆಮ್ಮೆಯಲ್ಲದೆ ವಿಶ್ವವಿಖ್ಯಾತವಾಗಿದೆ ಕೂಡ
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ