spot_img

ಪ್ಲಮ್ ಹಣ್ಣಿನ ಸಿಹಿ ರುಚಿಯ ಹಿಂದಿರುವ ಆರೋಗ್ಯದ ಗುಟ್ಟುಗಳು

Date:

ವಿಭಿನ್ನ ಬಣ್ಣವನ್ನು ಹೊಂದಿರುವ ಪ್ಲಮ್ ಹಣ್ಣು (ಆಲೂ ಬುಖಾರ) ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಅಮೂಲ್ಯ ಕೊಡುಗೆ ನೀಡುತ್ತದೆ. ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬಂದರೂ ಅಕ್ಟೋಬರ್ ವರೆಗೆ ಸವಿಯಬಹುದಾದ ಈ ಹಣ್ಣು ವಿವಿಧ ಪೌಷ್ಟಿಕಾಂಶಗಳಿಂದ ತುಂಬಿದೆ. ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಂ, ತಾಮ್ರ, ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್‌ಗಳ ಭಂಡಾರವಿರುವ ಪ್ಲಮ್ ಹಣ್ಣಿನ ಆರೋಗ್ಯ ಪ್ರಯೋಜನಗಳಿವು:

ಪ್ಲಮ್ ಹಣ್ಣಿನ ಪ್ರಮುಖ ಆರೋಗ್ಯ ಲಾಭಗಳು:

ರಕ್ತಪರಿಚಲನೆ ಉತ್ತಮಗೊಳಿಸುತ್ತದೆ: ವಿಟಮಿನ್ ಕೆ, ಪೊಟ್ಯಾಸಿಯಂ ಮತ್ತು ಕಬ್ಬಿಣದ ಸಂಯೋಜನೆ ರಕ್ತ ಶುದ್ಧೀಕರಣ, ಹೆಮೋಗ್ಲೋಬಿನ್ ವೃದ್ಧಿಗೆ ನೆರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ: ನಾರಿನಂಶ, ಐಸಟಿನ್ ಮತ್ತು ಸೋರ್ಬಿಟೋಲ್ ಜೀರ್ಣಾಂಗದ ಚಟುವಟಿಕೆ ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಣೆಯಲ್ಲಿಯೂ ನೆರವಾಗುತ್ತದೆ.

ಚರ್ಮದ ಆರೋಗ್ಯ: ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳೇ ಚರ್ಮದ ಹೊಳಪು, ಯೌವನ ಹಾಗೂ ಸುಕ್ಕು ನಿವಾರಣೆಗೆ ಕಾರಣ.

ರೋಗನಿರೋಧಕ ಶಕ್ತಿ ಮತ್ತು ಹೃದಯದ ರಕ್ಷಣೆ: ವಿಟಮಿನ್ ಸಿ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಪಡಿಸಿ ಹೃದಯಾಘಾತದ ಅಪಾಯವನ್ನು ತಡೆಯುತ್ತದೆ.

ಕಣ್ಣುಗಳಿಗೆ ರಕ್ಷಣಾ ಪರದೆಯಂತೆ: ಬಿಟಾ-ಕೆರೋಟಿನ್ ಹಾಗೂ ವಿಟಮಿನ್ ಸಿ ಕಣ್ಣಿನ ದೃಷ್ಠಿ, ಪೊರೆ ಮತ್ತು ವಯೋಸಂಧಿಗತ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.

🍽️ ಅಡುಗೆ ಉಪಯೋಗಗಳು:

ಪ್ಲಮ್ ಹಣ್ಣಿನಿಂದ ಕೇಕ್, ಜಾಮ್, ಸಾಸ್, ಉಪ್ಪಿನಕಾಯಿ ಮುಂತಾದವುಗಳನ್ನು ತಯಾರಿಸಬಹುದು. ತಾಜಾ ಹಣ್ಣಾಗಿಯೂ ಸೇವಿಸಬಹುದಾದ ಇದು ಒಳ್ಳೆಯ ಚಟುವಟಿಕೆಯಿಂದ ಕೂಡಿದ ಡೆಸರ್ಜ್ಟ್ ಆಗಿ ಪರಿಣಮಿಸಬಹುದು.

ಪ್ಲಮ್ ಸಾಸ್ ತಯಾರಿ ಟಿಪ್: ಪ್ಲಮ್, ರೋಸ್ಮೆರಿ, ಸಕ್ಕರೆ, ನಿಂಬೆ ಮತ್ತು ಉಪ್ಪು ಬೆರೆಸಿ 10 ನಿಮಿಷ ಕುದಿಸಿದರೆ ರುಚಿಕರ ಪ್ಲಮ್ ಸಾಸ್ ಸಿದ್ಧ!

ಒಟ್ಟಿನಲ್ಲಿ, ನಿಸರ್ಗ ನೀಡಿದ ಪ್ಲಮ್ ಹಣ್ಣು ಆರೋಗ್ಯಕ್ಕಾಗಿ ನಿಜವಾದ ವರವಾಗಿದೆ. ಪ್ರತಿದಿನದ ಆಹಾರದಲ್ಲಿ ಇದನ್ನು ಸೇರಿಸಿಕೊಳ್ಳಿ – ಆರೋಗ್ಯವಂತ ಜೀವನದತ್ತ ಹೆಜ್ಜೆ ಇಡಿ!

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಕಾಮನ್ವೆಲ್ತ್ ದಿನಾಚರಣೆ

ಈ ದಿನವನ್ನು ಕಾಮನ್ವೆಲ್ತ್ ರಾಷ್ಟ್ರಗಳ ಕೆಲವು ಭಾಗಗಳಲ್ಲಿ ರಜಾದಿನವಾಗಿ ಗುರುತಿಸಲಾಗುತ್ತದೆ.

ಕಾಂತಾರ-1 ಚಿತ್ರದ ಬಿಡುಗಡೆ ದಿನಾಂಕ ಘೋಷಣೆ!

ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಚಿತ್ರ ಕಾಂತಾರ ಕನ್ನಡ ಚಿತ್ರರಂಗದಲ್ಲಿ ಅಪಾರ ಯಶಸ್ಸನ್ನು ಗಳಿಸಿತ್ತು.

ಕಾರ್ಕಳದ ಸಾಚಿ ಶೆಟ್ಟಿ 3ನೇ ರ್‍ಯಾಂಕ್

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಚಿ ಶೆಟ್ಟಿ ರಾಜ್ಯದಲ್ಲಿ 3ನೇ ರ್ಯಾಂಕ್ ಪಡೆದು ಕಾರ್ಕಳಕ್ಕೆ ಹೆಮ್ಮೆ ತಂದಿದ್ದಾರೆ.

ಮದುವೆಗೆ ವಧುವಿನ ನಿರಾಕರಣೆ! ಕೊನೆಕ್ಷಣದಲ್ಲಿ ಮುಹೂರ್ತ ರದ್ದು

ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಿಗದಿತವಾಗಿದ್ದ ಮದುವೆ ಕೊನೆ ಕ್ಷಣದಲ್ಲಿ ರದ್ದಾಗಿದೆ