ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳ ಸುಲಿಗೆ : ವಜಾಗೊಂಡಿದ್ದ ಕಾನ್‌ಸ್ಟೇಬಲ್ ಬಂಧನ

Date:

spot_img

ಬೆಂಗಳೂರು: ಲೋಕಾಯುಕ್ತ ಡಿವೈಎಸ್‌ಪಿ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ಮುರುಗಪ್ಪ ನಿಂಗಪ್ಪ ಕುಮಾರ್ ಎಂದು ಗುರುತಿಸಲಾಗಿದೆ.

ಬೆಳಗಾವಿ ಮೂಲದ 56 ವರ್ಷದ ಮುರಗಪ್ಪ ಕುಮಾರ್ ಈ ಹಿಂದೆಯೂ ಇಂತಹ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದನು. ಅವನು ಮೊದಲು ಪೊಲೀಸ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ್ದರೂ, ಹಲವು ವರ್ಷಗಳ ಹಿಂದೆ ವಜಾಗೊಂಡಿದ್ದ. ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.


ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಕುಮಾರ್, ಲೋಕಾಯುಕ್ತ ಅಧಿಕಾರಿಯೆಂದು ಸುಳ್ಳು ಹೇಳಿ, ಅವರ ವಿರುದ್ಧ ಅಕ್ರಮ ಆಸ್ತಿ (ಡಿಎ) ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿ ಹಣ ನೀಡುವಂತೆ ಪ್ರೇರೇಪಿಸುತ್ತಿದ್ದ.

ಇತ್ತೀಚೆಗೆ, ಈತ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ್ ಆರ್ ಮಗದಮ್ ಅವರಿಗೂ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದ. ಇದರಿಂದ ಅನುಮಾನಗೊಂಡ ಬಸವರಾಜ್ ಅವರು ಪ್ರಕರಣ ದಾಖಲಿಸಿ ದೂರು ನೀಡಿದ ನಂತರ, ಪೊಲೀಸರು ತನಿಖೆ ನಡೆಸಿ ಕುಮಾರನ್ನು ಬಂಧಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಲಾವಣ್ಯಾ ಕೊಲೆ ಪ್ರಕರಣ: ಆರೋಪಿ ಚೇತನ್ ಬಂಧನಕ್ಕೆ ಗಿರೀಶ್ ಧೈರ್ಯ

ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ಬಂಧನಕ್ಕೆ ಸ್ಥಳೀಯ ಯುವಕ ಗಿರೀಶ್ ವಹಿಸಿದ ಸಾಹಸಮಯ ಪಾತ್ರದ ಸಂಪೂರ್ಣ ವಿವರ, ಪೂರ್ಣ ಮಾಹಿತಿ ಇಲ್ಲಿದೆ ಓದಿ

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಆಪ್ತರ ಭೇಟಿಗೆ ಕೋರ್ಟ್ ಸಮ್ಮತಿ

ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಜೈಲಿನಲ್ಲಿ ಆಪ್ತರ ಭೇಟಿಗೆ ಅನುಮತಿ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ