spot_img

ಸಮಾಜಮುಖಿ ಸೇವೆಯಲ್ಲಿ ಮತ್ತೊಂದು ಮೈಲಿಗಲ್ಲು: ಆಸರೆಯ ಮನೆ ಹಸ್ತಾಂತರ ಕಾರ್ಯಕ್ರಮ

Date:

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ)ಕರ್ನಾಟಕ ಇದರ 81ನೇ ಸೇವಾ ಯೋಜನೆ ಒಂದಿಷ್ಟು ಸಮಾಜಕ್ಕಾಗಿ

ಕರಕರಿ ಫ್ರೆಂಡ್ಸ್ ಸೇವಾ ಬಳಗವು 80 ಯೋಜನೆಗಳನ್ನು ಯಶಸ್ವಿ ಯಾಗಿ ನೀಡಿದ್ದು ಈ ಯೋಜನೆಯಲ್ಲಿ ಈಗಾಗಲೇ 8 ಲಕ್ಷ ವೆಚ್ಚದಲ್ಲಿ ಕಣಂಜಾರು ಮಡಿಬೆಟ್ಟುವಿನಲ್ಲಿ ಮನೆ ನಿರ್ಮಾಣ ಮಾಡಿ ಆಸರೆ ಮನೆ ಹಸ್ತಾಂತರ ಮಾಡಲಾಗಿದ್ದು ಅದರ ಜೊತೆಗೆ ಊರಿಗೆ ತುರ್ತು ಪರಿಸ್ಥಿತಿ ಗೆ ಪ್ರಯೋಜನ ವಾಗುವಂತೆ ಅತೀ ಅಮೂಲ್ಯ ಯೋಜನೆ ಯಾದ ಆಂಬುಲೆನ್ಸ್ ಸೇವೆ ಒದಗಿಸುವಿಕೆ, ಅದರ ಜೊತೆ ಶಾಲಾ ಕಾಲೇಜು ಗಳಿಗೆ ಮೂಲಭೂತ ಸೌಕರ್ಯಗಳ ಒದಗಿಸುವಿಕೆ, ಕ್ರೀಡಾ ಸಾಧನೆ ಗಳಿಗೆ ಸಹಕಾರ, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಶಾಲಾ ಮಕ್ಕಳಿಗೆ ಬ್ಯಾಗ್, ಕೊಡೆ, ಪುಸ್ತಕ ವಿತರಣೆ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಹಾಯಧನ, ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಹೀಗೆ ಉತ್ತಮ ಸಮಾಜ ಮುಖಿ ಕೆಲಸವನ್ನು ಮಾಡುತ್ತಾ ಬಂದಿರುತ್ತದೆ. 1 ವರ್ಷದಲ್ಲಿ ಆಂಬುಲೆನ್ಸ್ 190 ಸೇವೆಯನ್ನು ನೀಡಿದ್ದು ಅದರಲ್ಲಿ 78 ಸೇವೆ ಬಡವರಿಗೆ ಉಚಿತವಾಗಿ ನೀಡಿರುತ್ತದೆ.ಈಗಾಗಲೇ 38 ಲಕ್ಷ ರೂಪಾಯಿ ಸೇವಾ ಯೋಜನೆ ನೀಡಿದ ಸಾಧನೆ ಈ ಸಂಸ್ಥೆಯದ್ದು. ಮುಂದುವರೆದು ಈಗ 81 ನೇ ಸೇವಾಯೋಜನೆ ನೀಡಲು ಮಹತ್ತರ ಯೋಜನೆಯನ್ನು ಹಮ್ಮಿ ಕೊಂಡಿದ್ದು

ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ವತಿಯಿಂದ ಹಾಗೂ ಸಹೃದಯಿ ದಾನಿಗಳ ಸಹಕಾರದಿಂದ

ರಾಜೀವ್ ನಗರ ಹಿರ್ಗಾನ ದಿನೇಶ್ ರವರು 12 ವರ್ಷದ ಹಿಂದೆ ನಿರ್ಮಾಣ ಮಾಡಿರುವ ಮನೆಗೆ ಮೂಲಭೂತ ಸೌಕರ್ಯವಿಲ್ಲದೆ ಬಹಳ ಆರ್ಥಿಕವಾಗಿ ನೊಂದಿರುವ ಕುಟುಂಬಕ್ಕೆ ಆಸರೆಯಾಗಿ ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್ ತಂಡ ಕೈ ಜೋಡಿಸಿ ಮನೆಯ ಸಂಪೂರ್ಣ ಕೆಲಸವನ್ನು ಮಾಡಿಕೊಟ್ಟಿರುತ್ತದೆ,
*ದಿನೇಶ್ ರವರ ಧರ್ಮಪತ್ನಿ ಕ್ಯಾನ್ಸರ್ ಎಂಬ ಗಂಭೀರ ಕಾಯಿಲೆ ಯಿಂದ ಬಳಲುತ್ತಿ ದ್ದು ಆರೋಗ್ಯ ಬಹಳ ಚಿಂತಾಜನಕವಾಗಿರುವುದರಿಂದ ಈ ಮನೆಯ ಸಂಪೂರ್ಣ ಕೆಲಸವನ್ನು ಮುಗಿಸಿ ಆಸರೆ ಮನೆಯ ಹಸ್ತಾಂತರ ವನ್ನು ಸರಳವಾಗಿ ಆಚರಿಸಲು ಸಂಸ್ಥೆಯವರು ತೀರ್ಮಾನಿಸಿರುತ್ತಾರೆ.

ಆಸರೆಯ ಮನೆಯ ಉದ್ಘಾಟನೆ ಮತ್ತು ಆಸರೆಯ ಮನೆಯ ಹಸ್ತಾಂತರವನ್ನು ಸನ್ಮಾನ್ಯ ಶ್ರೀ ವಿ ಸುನಿಲ್ ಕುಮಾರ್ ವರು ನೆರವೇರಿಸಲಿರುವರು.


ದಿನಾಂಕ
01/01/2025ನೇ ಬುಧವಾರ ಸಮಯ ಸಂಜೆ 5:30ಕ್ಕೆ
ಸ್ಥಳ ರಾಜೀವ್ ನಗರ ಹಿರ್ಗಾನ ಮುಜೂರು

ಸರ್ವರಿಗೂ ಆತ್ಮೀಯವಾದ ಸ್ವಾಗತವನ್ನು ಬಯಸುವ
ಕರಕರಿ ಫ್ರೆಂಡ್ಸ್ ಮತ್ತು ಬೈಲೂರು ಟೈಗರ್ಸ್.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.