ಪತಿಯ ಕಿಡ್ನಿ ಮಾರಿದ ಹಣದೊಂದಿಗೆ ಪ್ರಿಯಕರನ ಜೊತೆ ಪರಾರಿಯಾದ ಪತ್ನಿ!

Date:

spot_img

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪತಿಯ ಆದಾಯ ಸಾಕಾಗುತ್ತಿಲ್ಲವೆಂದು ಸದಾ ಕಿರುಕುಳ ನೀಡುತ್ತಿದ್ದ ಪತ್ನಿ, ಮಗಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಬೇಕೆಂದು ಪತಿಯನ್ನು ನಿರಂತರ ಒತ್ತಾಯಿಸುತ್ತಿದ್ದಳು. ಕೊನೆಗೆ ಕಿಡ್ನಿ ಮಾರಲು ಪತಿಯನ್ನು ಒತ್ತಾಯಿಸಿ, 10 ಲಕ್ಷ ರೂಪಾಯಿ ಬಂದ ತಕ್ಷಣವೇ ಫೇಸ್‌ಬುಕ್ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಪೀಡಿತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಪತ್ನಿಯ ಒತ್ತಡದಿಂದ ಬೇಸರಗೊಂಡು ಮಗಳ ಭವಿಷ್ಯದ ಆಸೆಗಾಗಿ ಒಂದು ಕಿಡ್ನಿಯನ್ನು ಮಾರಲು ಒಪ್ಪಿಕೊಂಡಿದ್ದಾನೆ . ಹಣ ಬಂದ ನಂತರ ಪತ್ನಿ ಅದನ್ನು ತನ್ನ ಬಳಿಗೆ ತೆಗೆದುಕೊಂಡು, ನಸುಕಿನ ಜಾವ ಪ್ರೇಮಿಯ ಜೊತೆ ಮನೆ ಬಿಟ್ಟು ಓಡಿಹೋಗಿದ್ದಾಳೆ.

ಅನೇಕ ದಿನಗಳ ಹುಡುಕಾಟದ ನಂತರ, ಪತ್ನಿ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ . ಪತಿ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದಾಗ, ಪತ್ನಿ ಹೈಡ್ರಾಮಾ ನಡೆಸಿ, ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.

ಪತ್ನಿಯ ನಡವಳಿಕೆಯಿಂದ ಆಘಾತಗೊಂಡ ಪತಿ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. 1994ರಿಂದ ಮಾನವ ಅಂಗಾಂಗ ಮಾರಾಟವನ್ನು ಭಾರತದಲ್ಲಿ ಕಾನೂನುಬಾಹಿರಗೊಳಿಸಲಾಗಿದೆ. ಆದರೆ ದಾನಿಗಳ ಕೊರತೆಯಿಂದಾಗಿ ಈ ದಂಧೆ ಇನ್ನೂ ನಿಂತಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಲೋಕಾಯುಕ್ತ ದಾಳಿ: ಸರ್ಕಾರಿ ಗೋದಾಮುಗಳಲ್ಲಿ ಬಯಲಾದ ಕಳ್ಳಾಟ

ಬೆಂಗಳೂರಿನ ಸರ್ಕಾರಿ ಆಹಾರ ಗೋದಾಮುಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಅಕ್ರಮಗಳನ್ನು ಪತ್ತೆಹಚ್ಚಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ತುಳು ನಿಗಮ ಹಾಗೂ ಭವನ ನಿರ್ಮಾಣಕ್ಕೆ ಸಿಎಂಗೆ ಮುನಿಯಾಲ್ ಮನವಿ

ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣ ಮತ್ತು ತುಳು ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸಿಎಂಗೆ ಉದಯ್ ಶೆಟ್ಟಿ ಮುನಿಯಾಲ್ ಮನವಿ ಸಲ್ಲಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಡಿ.ಕೆ. ಶಿವಕುಮಾರ್: ರಾಜ್ಯದ ಪೊಲೀಸ್ ಆಧುನೀಕರಣಕ್ಕೆ ಕೋಟ್ಯಂತರ ರೂ. ಅನುದಾನಕ್ಕೆ ಮನವಿ

ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಡಿ.ಕೆ. ಶಿವಕುಮಾರ್ ಭದ್ರತಾ ಮೂಲಸೌಕರ್ಯ ಅಭಿವೃದ್ಧಿಗೆ ಕೋರಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಖಡ್ಗ ನೀಡಿದ ಸಿಎಂ ವಿಜಯ್

ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಬೆಳ್ಳಿ ಖಡ್ಗ ಸಮರ್ಪಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.