ಕ್ಷತ್ರಿಯ ಮರಾಠ ಸಮಾಜ (ರಿ.) ಕಾರ್ಕಳ, ಇದರ ಆಶ್ರಯದಲ್ಲಿ ರ‍್ಯಾಂಕ್ ವಿಜೇತ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅದಿತ್ಯವಾರ ನಡೆಯಿತು.
ಜೆ.ಇ.ಇ ಮೈನ್, ಬಿ.ಆರ್ಕ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್, 13 ವಿದ್ಯಾರ್ಥಿಗಳಿಗೆ 98ಕ್ಕಿಂತ ಅಧಿಕ ಪರ್ಸಂಟೈಲ್, 17 ವಿದ್ಯಾರ್ಥಿಗಳಿಗೆ 97ಕ್ಕಿಂತ ಅಧಿಕ ಪರ್ಸಂಟೈಲ್, 19 ವಿದ್ಯಾರ್ಥಿಗಳಿಗೆ 96ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 24 ವಿದ್ಯಾರ್ಥಿಗಳು 95ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ.