ಪುತ್ತಿಗೆ – ಬೊಮ್ಮರಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀಪುತ್ತಿಗೆ ಮಠಾಧೀಶ ಪರಮಪೂಜ್ಯ ಶ್ರೀ ಶ್ರೀ ಸುಗುಣೀಂದ್ರತೀರ್ಥ ಶ್ರೀಪಾದರು ಮತ್ತು ಶಿಷ್ಯರಾದ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಆದೇಶದಂತೆ ವಾರ್ಷಿಕ ಜಾತ್ರಾ ಮಹೋತ್ಸವ ಏಪ್ರಿಲ್ 12ರಿಂದ 16ರವರೆಗೆ ವೈಭವದಿಂದ ನಡೆಯಲಿದೆ.
ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಬೈಲೂರು-ಕೌಡೂರು ನಾಯರ್‌ಬೆಟ್ಟು ಧಾರ್ಮಿಕ ಸೇವಾ ಸಮಿತಿ ವತಿಯಿಂದ ಕೌಡೂರು-ಬೈಲೂರು ಶ್ರೀ ಕೋಟೆ ಆಂಜನೇಯ ಸನ್ನಿಧಿಯಲ್ಲಿ ಹನುಮ ಜಯಂತಿ ಪವಿತ್ರ ಧಾರ್ಮಿಕ ಪೂಜಾ ವಿಧಿಗಳೊಂದಿಗೆ ಇಂದು (ಏ.12) ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.