ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಣೆ

Date:

spot_img

ಕಾರ್ಕಳ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿಯನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುಧಾಕರ ದಾನಶಾಲೆ ಅವರು ಮಾತನಾಡಿ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಜೊತೆಗೆ ಹಲವಾರು ಆಧುನಿಕ ಯೋಜನೆಗಳಿಗೆ ನಾಂದಿ ಹಾಡಿದ್ದಾರೆ, ಅದರ ಒಂದು ಸಣ್ಣ ಉದಾಹರಣೆಯೆಂದರೆ ವಿದ್ಯುತ್ ಇಲಾಖೆಯಿಂದ ಮನೆ ಮನೆ ವಿತರಣೆಯಾಗುವ ವಿದ್ಯುತಿಗೆ ಬಿಲ್ಲನ್ನು ನೀಡುವ ಕಲ್ಪನೆಯನ್ನು ದೇಶಕ್ಕೆ ಕೊಟ್ಟವರು ಅಂಬೇಡ್ಕರವರು. ಸಮಾನತೆಗಾಗಿ ಹೋರಾಡಿದ ಅಂಬೇಡ್ಕರ್ ಅವರ ವಿರುದ್ದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಪಪ್ರಚಾರವನ್ನು ಮಾಡುತ್ತಿರುವುದು ಖೇದಕರ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ ಸರ್ವರಿಗೂ ಸಮಬಾಳು ಸಮಪಾಲು ನೀಡುವ ದ್ಯೇಯೊದ್ದೇಶದಿಂದ ರಚಿತವಾದ ಭಾರತದ ಸಂವಿಧಾನದ ನಿಜವಾದ ಆಶಯಗಳು ಇಂದು ಈಡೇರುತ್ತಿಲ್ಲ, ಸಂವಿಧಾನಕ್ಕೆ ವಿರುದ್ದವಾಗಿ ಜಾತಿ ಅಸಮಾನತೆಗಳು ವಿವಿಧ ರೂಪದಲ್ಲಿ ನಿರಂತರವಾಗಿ ಮುಂದುವರೆಯುವುದು ಬೇಸರದ ಸಂಗತಿಯಾಗಿದೆ, ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರು ವಕೀಲರಾದ ರೆಹಮತುಲ್ಲಾ ಮಾತನಾಡಿ ಸಂವಿಧಾನವನ್ನು ಕಾನೂನಿನ ಮೂಲಕ ಭಾರತದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಂಬೇಡ್ಕರ್ ಪಾತ್ರ ಪ್ರದಾನವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭಾಕರ ಬಂಗೇರ, ಮಾಜಿ ಪುರಸಭಾ ಅಧ್ಯಕ್ಷರಾದ ಸುಭಿತ್.ಎನ್.ಆರ್, ಪುರಸಭಾ ಸದಸ್ಯೆ ಪ್ರತಿಮಾ ರಾಣೆ, ಪ್ರಭಾ ಕಿಶೋರ್, ಮೀನುಗಾ ಕಾಂಗ್ರೆಸಿನ , ಪುರಸಭಾ ಸದಸ್ಯರಾದ ವಿವೇಕಾನಂದ ಶೆಣೈ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಸುನಿತಾ ಶೆಟ್ಟಿ, ಪುರಸಭಾ ಸದಸ್ಯೆ ಅಶ್ಪಕ್ ಅಹಮದ್, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಾಜೇಂದ್ರ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರುಕ್ಮಾಯ ಶೆಟ್ಟಿಗಾರ್, ಸುದರ್ಶನ್ ಬಂಗೇರ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೋಗಿ , ಮೀನುಗಾರ ಘಟಕದ ಅದ್ಯಕ್ಷ ಮುರಳಿ ರಾಣೆ ಮಾರ್ಕೆಟ್ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಅನಿಲ್ ಪೂಜಾರಿ ನೆಲ್ಲಿಗುಡ್ಡೆ ಅವರು ಸ್ವಾಗತಿಸಿ, ನಾಗೇಶ ಆಚಾರ್ಯ ಬೆಳ್ಮಣ್ ಅವರು ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಅಕ್ರಮ ಸಕ್ರಮ ಸಮಿತಿಯ ರಮೇಶ್ ಬೆಜಕಳ ಅವರು ಧ್ಯೆಯ ಗೀತೆಯನ್ನು ಹಾಡಿ ಬ್ಲಾಕ್ ವಕ್ತಾರರಾದ ಪ್ರದೀಪ್ ಬೇಲಾಡಿ ಧನ್ಯವಾದವಿತ್ತರು.

ಬ್ಲಾಕ್ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರು ವಕೀಲರಾದ ರೆಹಮತುಲ್ಲಾ ಮಾತನಾಡಿ ಸಂವಿಧಾನವನ್ನು ಕಾನೂನಿನ ಮೂಲಕ ಭಾರತದಲ್ಲಿ ಅನುಷ್ಠಾನಗೊಳಿಸುವಲ್ಲಿ ಅಂಬೇಡ್ಕರ್ ಪಾತ್ರ ಪ್ರದಾನವಾಗಿದೆ ಎಂದು ಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಿಕ್ಕಿಂ ಸುರಂಗ ಕುಸಿತ ದುರಂತ: 8 ಸಾವು, 18 ಕಾರ್ಮಿಕರು ಸಿಲುಕಿರುವ ಶಂಕೆ

ಸಿಕ್ಕಿಂನ ನಾಮ್ಚಿ ಬಳಿ ಜಲವಿದ್ಯುತ್ ಸುರಂಗ ಕುಸಿದು 8 ಮಂದಿ ಸಾವು. ಮೀಥೇನ್ ಅನಿಲ ಸೋರಿಕೆಯಿಂದ ಕಾರ್ಯಾಚರಣೆಗೆ ಅಡ್ಡಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳದಲ್ಲಿ ಯುವತಿಗೆ ಹಲ್ಲೆ, ಜೀವ ಬೆದರಿಕೆ: ಯುವಕನ ವಿರುದ್ಧ ಪ್ರಕರಣ

ಕಾರ್ಕಳದಲ್ಲಿ 19 ವರ್ಷದ ಯುವತಿಗೆ ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಬಿಗ್ ಬಾಸ್ ಹೊಸ ಸೀಸನ್: 6 ಭಾಷೆಗಳಲ್ಲಿ ಶೋ, ಸೌರವ್ ಗಂಗೂಲಿ ಎಂಟ್ರಿ

ಜಿಯೋಸ್ಟಾರ್‌ನಿಂದ 6 ಭಾಷೆಗಳಲ್ಲಿ ಬಿಗ್ ಬಾಸ್ ಆರಂಭ. ಬಾಂಗ್ಲಾ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಲಾವಣ್ಯಾ ಕೊಲೆ ಪ್ರಕರಣ: ಆರೋಪಿ ಚೇತನ್ ಬಂಧನಕ್ಕೆ ಗಿರೀಶ್ ಧೈರ್ಯ

ಲಾವಣ್ಯಾ ಕೊಲೆ ಪ್ರಕರಣದ ಆರೋಪಿ ಚೇತನ್ ಬಂಧನಕ್ಕೆ ಸ್ಥಳೀಯ ಯುವಕ ಗಿರೀಶ್ ವಹಿಸಿದ ಸಾಹಸಮಯ ಪಾತ್ರದ ಸಂಪೂರ್ಣ ವಿವರ, ಪೂರ್ಣ ಮಾಹಿತಿ ಇಲ್ಲಿದೆ ಓದಿ