ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಬ್ಲಾಕ್ ಕಂಪನಿಯ ಸಿಇಒ ಜ್ಯಾಕ್ ಡಾರ್ಸೆ ಈಗ ಮತ್ತೊಂದು ಮಹತ್ವದ ತಂತ್ರಜ್ಞಾನ ಆವಿಷ್ಕಾರದೊಂದಿಗೆ ಮುಂಚೂಣಿಗೆ ಬಂದಿದ್ದಾರೆ. ಇಂಟರ್ನೆಟ್ ಅಥವಾ ಮೊಬೈಲ್ ನೆಟ್‌ವರ್ಕ್ ಇಲ್ಲದೆಯೂ ಸಂವಹನ ನಡೆಸಲು ಸಾಧ್ಯವಾಗುವ "ಬಿಟ್ಚಾಟ್" ಎಂಬ ಹೊಸ ಚಾಟ್ ಅಪ್ಲಿಕೇಶನ್ ಅನ್ನು ಅವರು ಅಭಿವೃದ್ಧಿಪಡಿಸಿದ್ದಾರೆ.