ಅವೈಜ್ಙಾನಿಕ ನೋಟಿಸ್ ಜಾರಿಗೊಳಿಸಿದ ಕೇಂದ್ರ ಸರ್ಕಾರದ ತೆರಿಗೆ ಇಲಾಖೆಯ ಕ್ರಮದಿಂದ ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದ ರಾಜ್ಯದ ವರ್ತಕ ವಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿಶೇಷ ಕಾಳಜಿಯಿಂದ ರಕ್ಷಿಸಿದ್ದಾರೆಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಹರ್ಷ ವ್ಯಕ್ತಪಡಿಸಿದ್ದಾರೆ.
ನಿಂಜೂರು ಗ್ರಾಮದ ಬೂತ್ ಸಂಖ್ಯೆ -63 ಬೂತ್ ಸಮಿತಿಯ ಸಭೆಯು ದಿನಾಂಕ-30/06/2025 ಸೋಮವಾರ ಸಂಜೆ ಘಂಟೆ 5.30ಕ್ಕೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾನ್ಯ ಶ್ರೀ ವಿಲ್ಸನ್ ಲೋಬೊ ಅವರ ಅಧ್ಯಕ್ಷತೆಯಲ್ಲಿ ಬೂತ್ ಸಂಖ್ಯೆ-63 ಸಮಿತಿಯ ಸೇವಾದಳದ ಅಧ್ಯಕ್ಷರಾದ ನಿಂಜೂರು ಪಾತಾವು ಶ್ರೀ ರೋನಾಲ್ಡ್ (ರೋನಿ) ಡಿಸೋಜ ಅವರ ಹಾಲ್ ನಲ್ಲಿ ನಡೆಯಿತು.