ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ರಾಡಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ, ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ (ಕಾರ್ಕಳ)ವು ಆರೋಪಿ ಬಲರಾಮ ಹೆಗ್ಡೆಯನ್ನು ದೋಷಿ ಎಂದು ಮಂಗಳವಾರ ತೀರ್ಪು ನೀಡಿದೆ.
ಗರುಡ ಗ್ಯಾಂಗ್‌ನ ಪ್ರಮುಖ ಮತ್ತು ಕುಖ್ಯಾತ ಅಪರಾಧಿಯಾದ ಕಾರ್ಕಳದ ಕೌಡೂರು ಗ್ರಾಮದ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ಎಂಬಾತನನ್ನು 'ಗೂಂಡಾ ಕಾಯ್ದೆ' (ಕರ್ನಾಟಕ ಆಂಟಿ-ಸೋಶಿಯಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್) ಅಡಿಯಲ್ಲಿ ಬಂಧಿಸಲು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.